ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10ನೇ ಕಂತಿನ ಹಣ ಡಿಸೆಂಬರ್ 15ರಿಂದ ಫಲಾನುಭವಿಗಳ ಖಾತೆ ಸೇರುವ ಸಾಧ್ಯತೆಯಿದೆ. ಸರ್ಕಾರ ಇದಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಈ ಯೋಜನೆಯಡಿ ರೈತರು ಪ್ರತಿ ವರ್ಷ 6,000 ರೂಪಾಯಿ ಲಾಭ ಪಡೆಯುತ್ತಾರೆ. ತಲಾ 2,000 ರೂಪಾಯಿಗಳಂತೆ ಮೂರು ಕಂತುಗಳಲ್ಲಿ ಹಣ ನೀಡಲಾಗುತ್ತದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಾರಂಭವಾದಾಗಿನಿಂದ, ಕೇಂದ್ರ ಸರ್ಕಾರ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ತಲಾ 2000 ರೂಪಾಯಿ ಹಾಕ್ತಿದೆ. ಒಂಬತ್ತು ಕಂತುಗಳಲ್ಲಿ ಈಗಾಗಲೇ ಹಣ ಜಮಾ ಆಗಿದೆ.
ಈ ಯೋಜನೆಯಲ್ಲಿ ಕಂತುಗಳ ಮೂಲಕ ಹಣ ನೀಡುವ ಜೊತೆಗೆ ಅ ಅನೇಕ ಲಾಭಗಳನ್ನು ಸರ್ಕಾರ ರೈತಿಗೆ ನೀಡ್ತಿದೆ. ಕೇಂದ್ರ ಸರ್ಕಾರ, ಕೇಂದ್ರಿತ ಕ್ರೆಡಿಟ್ ಕಾರ್ಡ್, ಪಿಂಚಣಿ ಮತ್ತು ಐಡಿ ಕಾರ್ಡ್ ನೀಡುತ್ತದೆ.
ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ : ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿತ ರೈತರಿಗೆ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುತ್ತದೆ. ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ, ರೈತರು ಕೈಗೆಟುಕುವ ಬಡ್ಡಿದರದಲ್ಲಿ ಮುಂಗಡಗಳನ್ನು ತೆಗೆದುಕೊಳ್ಳಬಹುದು. ಪ್ರಸ್ತುತ, 7 ಕೋಟಿಗೂ ಹೆಚ್ಚು ರೈತರು, ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಮನ್ಧನ್ ಯೋಜನೆ : ಪ್ರಧಾನ ಮಂತ್ರಿ ಕಿಸಾನ್ ಮನ್ಧನ್ ಯೋಜನೆಯು ರೈತರ ನಿವೃತ್ತಿಯನ್ನು ಸುರಕ್ಷಿತಗೊಳಿಸುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಹೆಸರು ನೋಂದಾಯಿಸಲ್ಪಟ್ಟ ರೈತರು ಕಿಸಾನ್ ಮನ್ಧನ್ ಯೋಜನೆಯಡಿ ಪ್ರತಿ ತಿಂಗಳು ನಿಶ್ಚಿತ ಹಣವನ್ನು ಹೂಡಿಕೆ ಮಾಡಿದ್ರೆ, 60ನೇ ವರ್ಷದ ನಂತ್ರ 3000 ರೂಪಾಯಿ ಮೌಲ್ಯದ ಸ್ಥಿರ ಮಾಸಿಕ ಪಿಂಚಣಿ ಪಡೆಯಲಿದ್ದಾರೆ.
ಪಿಎಂ ಕಿಸಾನ್ ಐಡಿ ಕಾರ್ಡ್ : ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹೆಸರು ನೋಂದಾಯಿಸಿದ ರೈತರಿಗೆ ಪಿಎಂ ಕಿಸಾನ್ ಐಡಿ ಕಾರ್ಡ್ ನೀಡಲು ಕೇಂದ್ರ ಯೋಜಿಸುತ್ತಿದೆ. ಇದ್ರಲ್ಲಿ ರೈತರ ಹಿಡುವಳಿ ಬಗ್ಗೆ ಮಾಹಿತಿಯಿರಲಿದ್ದು, ಫಲಾನುಭವಿ ರೈತರಿಗೆ ಸರ್ಕಾರ ಯೋಜನೆ ಲಾಭ ನೀಡಲು ಇದು ನೆರವಾಗಲಿದೆ.