ರೈತರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅದರಲ್ಲಿ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯೂ ಒಂದು.
ಸದ್ಯದ ಪರಿಸ್ಥಿತಿಯಲ್ಲಿ ಕೃಷಿ ಉಪಕರಣಗಳು ದುಬಾರಿಯಾಗಿವೆ. ಬಡ ರೈತರಿಗೆ ಇದ್ರ ಖರೀದಿ ಕಷ್ಟವಾಗಿದೆ. ಹಾಗಾಗಿ ಹಳೆ ಪದ್ಧತಿಯಲ್ಲಿ ಕೃಷಿ ಅನಿವಾರ್ಯವಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಮೂಲಕ ರೈತರ ಹೊಣೆ ಕಡಿಮೆ ಮಾಡಿದೆ. ಕೇಂದ್ರ ಸರ್ಕಾರ ಟ್ರ್ಯಾಕ್ಟರ್‌ಗಳನ್ನು ಖರೀದಿಸಲು ಸಹಾಯಧನ ನೀಡುತ್ತಿದೆ.
ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯಡಿ, ರೈತರು ಯಾವುದೇ ಕಂಪನಿಯ ಟ್ರ್ಯಾಕ್ಟರ್‌ಗಳನ್ನು ಅರ್ಧದಷ್ಟು ಬೆಲೆಗೆ ಖರೀದಿಸಬಹುದು. ಉಳಿದ ಅರ್ಧದಷ್ಟು ಹಣವನ್ನು ಸರ್ಕಾರ ಸಹಾಯಧನವಾಗಿ ನೀಡಲಿದೆ. ಕೇಂದ್ರ ಮಾತ್ರವಲ್ಲದೆ, ಹಲವು ರಾಜ್ಯ ಸರ್ಕಾರಗಳು ತಮ್ಮ ಸ್ವಂತ ಮಟ್ಟದಲ್ಲಿ ಟ್ರ್ಯಾಕ್ಟರ್ ಖರೀದಿಸಲು ರೈತರಿಗೆ ಶೇಕಡಾ 20 ರಿಂದ 50ರಷ್ಟು ಸಹಾಯಧನವನ್ನು ನೀಡುತ್ತವೆ.
ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯಡಿ, ರೈತರು ಯಾವುದೇ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯಡಿ ಟ್ರ್ಯಾಕ್ಟರ್ ತೆಗೆದುಕೊಳ್ಳುವವರು ಆಧಾರ್ ಕಾರ್ಡ್, ಕೃಷಿ ಭೂಮಿಯ ಪತ್ರ, ಬ್ಯಾಂಕ್ ವಿವರಗಳು, ಪಾಸ್‌ಪೋರ್ಟ್ ಅಳತೆಯ ಫೋಟೋವನ್ನು ದಾಖಲೆಯಾಗಿ ನೀಡಬೇಕಾಗುತ್ತದೆ.