ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿಗಳಿಗೆ ಮಹತ್ವದ ಸುದ್ದಿಯೊಂದಿದೆ. ಯೋಜನೆಯ 10ನೇ ಕಂತು ದ್ಯದಲ್ಲಿಯೇ ಬಿಡುಗಡೆಯಾಗಲಿದೆ.
ಈ ಮಧ್ಯೆ ಸರ್ಕಾರಕ್ಕೆ ವಂಚಿಸಿ, ಹಣ ಪಡೆಯುತ್ತಿರುವವರನ್ನು ಪತ್ತೆ ಹಚ್ಚಿ, ಖಾತೆಗೆ ಹಾಕಿದ್ದ ಹಣವನ್ನು ವಾಪಸ್ ಪಡೆಯಲಾಗ್ತಿದೆ.
ಪ್ರವಾಸಕ್ಕೆ ಹೊರಡುವಾಗ ಇವನ್ನು ಮರೆಯಲೇಬೇಡಿ…..!
ಅನರ್ಹ ರೈತರ ಖಾತೆಯಿಂದ ಹಣ ವಾಪಸ್ ಪಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿರುವ ರೈತರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹಣವನ್ನು ಹಿಂದಿರುಗಿಸಬೇಕು. ರೈತರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತಂದಿದೆ. ಆದ್ರೆ ಕೆಲವರು ಸರ್ಕಾರಕ್ಕೆ ವಂಚಿಸಿ, ಈ ಯೋಜನೆ ಲಾಭ ಪಡೆಯುತ್ತಿದ್ದಾರೆ. ಬಿಹಾರ, ಜಾರ್ಖಂಡ ಸೇರಿದಂತೆ ಅನೇಕ ರಾಜ್ಯಗಳು ಇಂಥ ರೈತರ ವಿರುದ್ಧ ಕ್ರಮಕ್ಕೆ ಮುಂದಾಗಿವೆ.
ಈಗಾಗಲೇ ಸರ್ಕಾರ ಡಿಬಿಟಿ ವೆಬ್ಸೈಟ್ ರಚಿಸಿದೆ. ಅದರಲ್ಲಿ ಅರ್ಹತಾ ಮಾನದಂಡಗಳಿವೆ. ಈ ಯೋಜನೆಗೆ ಅರ್ಹತೆ ಪಡೆಯದ ರೈತರು ಪ್ರತಿ ಕಂತಿನ ಹಣವನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರಕ್ಕೆ ಹಿಂದಿರುಗಿಸಬೇಕಾಗುತ್ತದೆ.
ಚಳಿಗಾಲದಲ್ಲಿ ತಿನ್ನಿ ಬಿಸಿ ಬಿಸಿ ಆರೋಗ್ಯಕರ ರವಾ ʼಪರೋಟʼ
ಹೆಸರು ಬಿಡುಗಡೆ ಮಾಡಿದ ನಂತರ ರೈತರು ಬಾರದೆ ಇದ್ದಲ್ಲಿ ಕೃಷಿ ಭವನದ ವತಿಯಿಂದ ಮರುಪಾವತಿ ಪ್ರಕ್ರಿಯೆ ಆರಂಭಿಸುವಂತೆ ರಾಜ್ಯ ನೋಡಲ್ ಅಧಿಕಾರಿಯಿಂದ ನೋಟಿಸ್ ಜಾರಿ ಮಾಡಲಾಗುವುದು. ಅನರ್ಹ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಹೀಗೆ ಪರೀಕ್ಷಿಸಬಹುದು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ pmkisan.gov.in ಗೆ ಹೋಗಬೇಕು. ಮುಖಪುಟದಲ್ಲಿ ಅನರ್ಹ ವರ್ಗ, ರೈತರ ಹೆಸರು, ನೋಂದಣಿ ಸಂಖ್ಯೆ, ಲಿಂಗ, ರಾಜ್ಯ, ಬ್ಲಾಕ್, ಜಿಲ್ಲೆ, ಕಂತು ಮೊತ್ತ, ಮರುಪಾವತಿ ಮೋಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಬೇಕು.
ವಿವರಗಳನ್ನು ನಮೂದಿಸಿದ ನಂತರ ಪಟ್ಟಿ ತೆರೆದುಕೊಳ್ಳುತ್ತದೆ. ಈ ಪಟ್ಟಿಯನ್ನು ಪರಿಶೀಲಿಸಿ ಅಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಪರೀಕ್ಷಿಸಿ. ಒಂದು ವೇಳೆ ಹೆಸರಿದ್ದಲ್ಲಿ, ಈಗಾಗಲೇ ಪಡೆದ ಹಣವನ್ನು ಹಿಂತಿರುಗಿಸಿ. ಪ್ರತಿಯೊಂದು ರಾಜ್ಯವು ತನ್ನ ರೈತರಿಗಾಗಿ ತನ್ನದೇ ಆದ ಪ್ರತ್ಯೇಕ ವೆಬ್ಸೈಟ್ ಅನ್ನು ರಚಿಸಿದೆ. ಅಲ್ಲಿ ಹೆಸರು ಪರಿಶೀಲಿಸಬೇಕಾಗುತ್ತದೆ.