ಮೋದಿ ಸರ್ಕಾರವು 2018 ರಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದೆ. ಪಿಎಂ ಕಿಸಾನ್ ಯೋಜನೆಯಡಿಯಲ್ಲಿ, ಎಲ್ಲಾ ಭೂ ಹಿಡುವಳಿ ರೈತರ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ವಾರ್ಷಿಕ ರೂ. 6000 ಆರ್ಥಿಕ ಲಾಭವನ್ನು ನೀಡಲಾಗುತ್ತದೆ. ಮೂರು ಸಮಾನ ಕಂತುಗಳಲ್ಲಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ರೂ. ಪಾವತಿಸಲಾಗುತ್ತಿದೆ. ಈವರೆಗೆ 10 ಕಂತುಗಳನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ಈಗ ರೈತ ಫಲಾನುಭವಿಗಳು 11ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ.
ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಭೂಹಿಡುವಳಿ ರೈತರ ಕುಟುಂಬಗಳು ಪಿಎಂ-ಕಿಸಾನ್ ಯೋಜನೆಯಡಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 1, 2022 ರಂದು 10 ನೇ ಕಂತನ್ನು ಬಿಡುಗಡೆ ಮಾಡಿದ್ದಾರೆ. ಈಗ, ಈ ನಿಟ್ಟಿನಲ್ಲಿ, ರೈತರು ಯೋಜನೆಯ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ಅಂಶಗಳ ಬಗ್ಗೆ ನಾವು ಮಾಹಿತಿ ನೀಡುತ್ತೇವೆ.
ಬಜರಂಗದಳ ಹರ್ಷ ನಿವಾಸಕ್ಕೆ ಸಂಸದ ತೇಜಸ್ವಿ ಸೂರ್ಯ ಸೇರಿ ಹಲವು ಗಣ್ಯರ ಭೇಟಿ, ಸಾಂತ್ವನ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿಯ ಸ್ಥಿತಿಯನ್ನು ತಿಳಿದುಕೊಳ್ಳಲು, ಈ ಸರಳ ಹಂತಗಳನ್ನು ಅನುಸರಿಸಿ
ಹಂತ 1: ಮೊದಲು PM ಕಿಸಾನ್ ಸಮ್ಮಾನ್ ನಿಧಿ ಹೋಮ್ ಪೇಜ್(pmkisan.gov.in)ಗೆ ಭೇಟಿ ನೀಡಿ
ಹಂತ 2: ನಂತರ ಹೋಮ್‌ಪೇಜ್ ನಲ್ಲಿರುವ ಬೆನಿಫಿಷರಿ ಸ್ಟೇಟಸ್(Beneficiary Status) ಟ್ಯಾಬ್ ಅನ್ನು ಕ್ಲಿಕ್ ಮಾಡಿ
ಹಂತ 3: “ಬೆನಿಫಿಷರಿ ಸ್ಟೇಟಸ್” ಕ್ಲಿಕ್ ಮಾಡಿದ ನಂತರ, ನೀವು ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯಲ್ಲಿ
ಯಾವುದಾದರೂ ಆಯ್ಕೆಯನ್ನು ಆರಿಸಬೇಕಾಗುತ್ತದೆ
ಹಂತ 4: ಆಯ್ಕೆಯನ್ನು ಆರಿಸಿದ ನಂತರ, “ಗೆಟ್ ಡೇಟಾ” (Get data) ಅನ್ನು ಕ್ಲಿಕ್ ಮಾಡಿ ಈಗ, ಫಲಾನುಭವಿಗಳು ಡೇಟಾವನ್ನು ನೋಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಯಾವುದೇ ಹೆಚ್ಚಿನ ಪ್ರಶ್ನೆಗಳು ಮತ್ತು ಸಂದೇಹಗಳಿದ್ದಲ್ಲಿ, ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಮಾಡಬಹುದು.