ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10ನೇ ಕಂತಿನ ದುಡ್ಡು ಜನವರಿ 1, 2022ರಲ್ಲಿ ಬಿಡುಗಡೆಯಾಗಿದೆ. 10ನೇ ಕಂತಿನ ದುಡ್ಡನ್ನು ಫಲಾನುಭವಿ ರೈತರಿಗೆ ವಿತರಿಸಲು ಕೇಂದ್ರ ಸರ್ಕಾರ 20,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
10 ಕೋಟಿಗೂ ಅಧಿಕ ರೈತರ ಕುಟುಂಬಗಳಿಗೆ ಈ ನೆರವಿನ ಧನ ತಲುಪಲಿದೆ. ಇದೇ ವೇಳೆ 351 ರೈತೋತ್ಪನ್ನ ಸಂಘಗಳಿಗೆ (ಎಪ್‌ಪಿಓ) 14 ಕೋಟಿ ರೂ.ಗಳ ನೆರವಿನ ಧನವನ್ನೂ ಬಿಡುಗಡೆ ಮಾಡಲಾಗಿದ್ದು, ಇದರಿಂದ 1.24 ಲಕ್ಷ ರೈತರಿಗೆ ಅನುವಾಗಲಿದೆ.
ಹೀಗಿದೆ ಚರ್ಮ-ತುಟಿಗಳು ಮತ್ತು ಉಗುರುಗಳಲ್ಲಿ ಓಮಿಕ್ರಾನ್ ನ ರೋಗ ಲಕ್ಷಣ
ನೀವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೂ 10ನೇ ಕಂತಿನ ದುಡ್ಡ ಬರದೇ ಇದ್ದಲ್ಲಿ, ನೀವು ಹೆಲ್ಪ್‌ಡೆಸ್ಕ್‌ಗೆ ಕರೆ ಮಾಡಿ ದೂರು ದಾಖಲಿಸಬಹುದು. pmkisan-ict@gov.inಗೆ ಸಂಪರ್ಕಿಸುವ ಮೂಲಕ ನಿಮ್ಮ ದೂರನ್ನು ಕಳುಹಿಸಬಹುದಾಗಿದೆ.
ನಿಮ್ಮ ಕಂತಿನ ದುಡ್ಡಿನ ಪಾವತಿಯ ಸ್ಟೇಟಸ್ ತಿಳಿಯಲು 011-23381092 ಸಹಾಯವಾಣಿಗೆ ಕರೆ ಮಾಡಬಹುದು.