ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಅರ್ಜಿಯ ಸ್ಥಿತಿ ತಿಳಿಯಲು ಈ ಸಂಖ್ಯೆ ಸಂಪರ್ಕಿಬಹುದು. ಎಲ್ಲಾ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12 ನೇ ಕಂತುಗಾಗಿ ಕಾಯುತ್ತಿದ್ದಾರೆ. ನಿಮ್ಮ ಮುಂದಿನ ಕಂತು ಹಣವು ನಿಮ್ಮ ಖಾತೆಗೆ ಯಾವಾಗ ಬರುತ್ತದೆ ಎಂಬುದನ್ನು ಕರೆ ಮಾಡುವ ಮೂಲಕ ತಿಳಿಯಬಹುದು.
ಸಹಾಯ, ಸಂಪೂರ್ಣ ವಿವರಗಳನ್ನು ಪಡೆಯಲು ನೀವು ಕರೆ ಮಾಡಬಹುದಾದ ಕೆಲವು ವಿಶೇಷ ಫೋನ್ ಸಂಖ್ಯೆಗಳನ್ನು ಕೇಂದ್ರ ಸರ್ಕಾರ ಒದಗಿಸಿದೆ. ರೈತರು ಟೋಲ್-ಫ್ರೀ ಸಂಖ್ಯೆ 155261 ಗೆ ಕರೆ ಮಾಡಬಹುದು.
ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಇರಲಿ ಅಥವಾ ಇಲ್ಲದಿರುವ ಬಗ್ಗೆ, ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡ ಬಗ್ಗೆ, ಹಣವನ್ನು ಖಾತೆಗೆ ಏಕೆ ಜಮಾ ಮಾಡಲಾಗುವುದಿಲ್ಲ? ಎಂಬುದರ ಮಾಹಿತಿ ಈ ಸಂಖ್ಯೆಗೆ ಕರೆ ಮಾಡಿದರೆ ರೈತರಿಗೆ ದೊರೆಯುತ್ತದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸಂಪರ್ಕ ಮಾಹಿತಿಯ ಕುರಿತು ಕೃಷಿ ಭಾರತ ಸೆಪ್ಟೆಂಬರ್ 10 ರಂದು ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಸೆಪ್ಟೆಂಬರ್‌ನಲ್ಲಿ ನಿಮ್ಮ ಖಾತೆಗೆ 12 ನೇ ಕಂತಿನ ಹಣವನ್ನು ಸರ್ಕಾರವು ಜಮಾ ಮಾಡುವ ಸಾಧ್ಯತೆ ಇದೆ. ರೈತರು ಶೀಘ್ರದಲ್ಲೇ ತಮ್ಮ ಖಾತೆಗಳಿಗೆ 2000 ರೂಪಾಯಿಗಳ ಕಂತುಗಳನ್ನು ಪಡೆಯಬಹುದು ಎನ್ನಲಾಗಿದೆ. ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.