ಕೇಂದ್ರ ಸರ್ಕಾರ, ನಿರಂತರವಾಗಿ ರೈತರಿಗೆ ಆರ್ಥಿಕ ಸಹಾಯ ಮಾಡ್ತಿದೆ. ಕೇಂದ್ರ ಸರ್ಕಾರ ಮತ್ತೊಮ್ಮೆ ರೈತರಿಗಾಗಿ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಸರ್ಕಾರ, ರೈತರಿಗೆ 15 ಲಕ್ಷ ರೂಪಾಯಿಗಳನ್ನು ನೀಡ್ತಿದೆ.
ಸರ್ಕಾರ, ಪಿಎಂ ಕಿಸಾನ್ ಎಫ್ಪಿಒ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ, ರೈತ ಉತ್ಪಾದಕರ ಸಂಸ್ಥೆಗೆ 15 ಲಕ್ಷ ರೂಪಾಯಿ ನೀಡಲಿದೆ. ದೇಶಾದ್ಯಂತ ರೈತರಿಗೆ ಹೊಸ ಕೃಷಿ ಉದ್ಯಮ ಆರಂಭಿಸಲು ಆರ್ಥಿಕ ನೆರವು ನೀಡಲಾಗುವುದು.
ಈ ಯೋಜನೆಯ ಲಾಭ ಪಡೆಯಲು, 11 ರೈತರು ಒಟ್ಟಾಗಿ ಒಂದು ಸಂಸ್ಥೆ ಅಥವಾ ಕಂಪನಿಯನ್ನು ರಚಿಸಬೇಕು. ಇದು ರೈತರಿಗೆ ಕೃಷಿ ಉಪಕರಣಗಳು ಅಥವಾ ರಸಗೊಬ್ಬರಗಳು, ಬೀಜಗಳು ಅಥವಾ ಔಷಧಿಗಳನ್ನು ಖರೀದಿಸಲು ನೆರವಾಗಲಿದೆ.
ರೈತರಿಗೆ ನೇರ ಪ್ರಯೋಜನ ನೀಡಲು ಈ ಯೋಜನೆಯನ್ನು ಆರಂಭಿಸಲಾಗಿದೆ. ರೈತರು ಯಾವುದೇ ಬ್ರೋಕರ್ ಬಳಿ ಹೋಗಬೇಕಾಗಿಲ್ಲ. ಈ ಯೋಜನೆಯಡಿ, ರೈತರು, ಮೂರು ವರ್ಷಗಳಲ್ಲಿ ಕಂತುಗಳನ್ನು ಪಾವತಿಸಬೇಕಾಗುತ್ತದೆ.
ಪಿಎಂ ಕಿಸಾನ್ ಎಫ್‌ಪಿಒ ಯೋಜನೆಯ ಲಾಭ ಪಡೆಯಲು ರೈತರು ಕಾಯಬೇಕು. ಸರ್ಕಾರ ನೋಂದಣಿ ಪ್ರಕ್ರಿಯೆಯನ್ನು ಇನ್ನೂ ಆರಂಭಿಸಿಲ್ಲ. ನೋಂದಣಿ ಪ್ರಕ್ರಿಯೆ ಆರಂಭವಾದ ತಕ್ಷಣ, ಅರ್ಜಿ ಸಲ್ಲಿಸಬಹುದು.