ಬಳ್ಳಾರಿ: ಕೇಂದ್ರ ಸರ್ಕಾರದ ಪಿ.ಎಂ.ಕಿಸಾನ್ ಯೋಜನೆಯಡಿ ನೊಂದಾಯಿತ ಅರ್ಹ ಫಲಾನುಭವಿಗಳು ಆಧಾರ್ ನಂಬರ್ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಆಧಾರ್ ನಂಬರ್ ಬ್ಯಾಂಕ್ ಖಾತೆಗೆ NPCI Seeding/ಜೋಡಣೆ ಆಗದಿರುವ ಕಾರಣ ಜಿಲ್ಲೆಯಲ್ಲಿ ಒಟ್ಟು 3,134 ಫಲಾನುಭವಿಗಳು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಪಿ.ಎಂ.ಕಿಸಾನ್ ಯೋಜನೆಯಡಿಯಲ್ಲಿ ದೊರೆಯುವ ನೇರ ಹಣ ವರ್ಗಾವಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುತ್ತದೆ.
ಜಿಲ್ಲೆಯಲ್ಲಿ ಬರುವ ಬಳ್ಳಾರಿ ತಾಲ್ಲೂಕಿನ 827 ರೈತರು, ಸಿರುಗುಪ್ಪ ತಾಲ್ಲೂಕಿನ 937 ರೈತರು , ಸಂಡೂರು ತಾಲ್ಲೂಕಿನ 383 ರೈತರು, ಕಂಪ್ಲಿ ತಾಲ್ಲೂಕಿನ 364 ರೈತರು, ಕುರುಗೋಡು ತಾಲ್ಲೂಕಿನ 623 ರೈತರು ಒಟ್ಟು 3134 ರೈತರು ಅರ್ಹ ಫಲಾನುಭವಿಗಳು ಆಧಾರ ನಂಬರ್ ಬ್ಯಾಂಕ್ ಖಾತೆಗೆ NPCI Seeding ಜೋಡಣೆ ಆಗದಿರುವ ಕಾರಣ ಪಿ.ಎಂ.ಕಿಸಾನ್ ಯೋಜನೆಯಡಿ ನೇರ ಹಣ ವರ್ಗಾವಣೆ ಆಗಿರುವುದಿಲ್ಲ.
ಆದ್ದರಿಂದ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಫಲಾನುಭವಿ ರೈತರು ಶೀಘ್ರವಾಗಿ ಸಂಬಂಧಪಟ್ಟ ಬ್ಯಾಂಕಿನಲ್ಲಿ ಆಧಾರ್ ನಂಬರನ್ನು ಬ್ಯಾಂಕ್ ಖಾತೆಗೆ NPCI Seeding ಜೋಡಣೆ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.