
ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರದಂದು ದೇಶದ 10 ಕೋಟಿ ಅಧಿಕ ರೈತ ಕುಟುಂಬಗಳಿಗೆ ಕಿಸಾನ್ ಸಮ್ಮಾನ್ ಯೋಜನೆ ಅಡಿ 16,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಪ್ರತಿಯೊಬ್ಬ ಫಲಾನುಭವಿ ಖಾತೆಗೆ ತಲಾ ಎರಡು ಸಾವಿರ ರೂಪಾಯಿಗಳು ಜಮೆಯಾಗುತ್ತದೆ.
ಒಂದು ವೇಳೆ ನೀವು ಫಲಾನುಭವಿಯಾಗಿದ್ದು, ಈ ಯೋಜನೆ ಅಡಿ 12ನೇ ಕಂತು 2000 ರೂಪಾಯಿಗಳನ್ನು ಸ್ವೀಕರಿಸದಿದ್ದ ಪಕ್ಷದಲ್ಲಿ, ಸೋಮವಾರದಿಂದ ಶುಕ್ರವಾರದವರೆಗೆ ಪಿಎಂ ಕಿಸಾನ್ ಹೆಲ್ಪ್ ಡೆಸ್ಕ್ ನಲ್ಲಿ ನಿಮ್ಮ ದೂರನ್ನು ಸಲ್ಲಿಸಬಹುದು.
ಅಥವಾ ಇಮೇಲ್ ವಿಳಾಸ pmkissan-ict@gov.in ಮೂಲಕ ನಿಮ್ಮ ದೂರನ್ನು ನೋಂದಾಯಿಸಬಹುದಾಗಿದೆ. ಇಲ್ಲವೇ ಸಹಾಯವಾಣಿ ಸಂಖ್ಯೆ 011-24300606 ಅಥವಾ ಪಿಎಮ್ ಕಿಸಾನ್ ಟೋಲ್ ಫ್ರೀ ಸಂಖ್ಯೆ 18001155266 ಅಥವಾ ಸ್ಥಿರ ದೂರವಾಣಿ ಸಂಖ್ಯೆಗಳಾದ 011-23381092, 23382401 ಸಂಪರ್ಕಿಸಬಹುದಾಗಿದೆ.