alex Certify ಪಿಎಂ ಕಿಸಾನ್ 11ನೇ ಕಂತು ಶೀಘ್ರ ಜಮಾ; ಇ-ಕೆವೈಸಿ ಇಲ್ಲದೆ ಕ್ರೆಡಿಟ್ ಆಗಲ್ಲ ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಎಂ ಕಿಸಾನ್ 11ನೇ ಕಂತು ಶೀಘ್ರ ಜಮಾ; ಇ-ಕೆವೈಸಿ ಇಲ್ಲದೆ ಕ್ರೆಡಿಟ್ ಆಗಲ್ಲ ಹಣ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿಯ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳಿಗೆ ಹನ್ನೊಂದನೇ ಕಂತಿನ ಹಣವನ್ನು ನೇರ ಖಾತೆಗೆ ಶೀಘ್ರವೇ ಜಮಾ ಮಾಡಲಾಗುತ್ತಿದೆ.

ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ ಪ್ರಕಾರ ಯೋಜನೆಗೆ ನೊಂದಾಯಿಸಿದ ರೈತರಿಗೆ ಇ- ಕೆ ವೈಸಿ ಕಡ್ಡಾಯವಾಗಿದೆ. ಆಧಾರ್ ಆಧಾರಿತ ಒಟಿಪಿ ದೃಢೀಕರಣಕ್ಕಾಗಿ ವೆಬ್ ಸೈಟ್‌ನ ಫಾರ್ಮರ್ ಕಾರ್ನರ್‌ನಲ್ಲಿರುವ ಇಕೆವೈಸಿ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹತ್ತಿರದ ಸಿಎಸ್‌ಸಿ ಕೇಂದ್ರಗಳನ್ನು ಸಂಪರ್ಕಿಸಬೇಕಾಗುತ್ತದೆ.

KYC ಹೆಸರಲ್ಲಿ ವಂಚನೆ…! ಗ್ರಾಹಕರಿಗೆ ಎಸ್.ಬಿ.ಐ. ನೀಡಿದೆ ಈ ಮಹತ್ವದ ಸೂಚನೆ

ಜನವರಿ 1 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10 ನೇ ಕಂತನ್ನು ಲಕ್ಷಾಂತರ ಅರ್ಹ ರೈತರಿಗೆ ವರ್ಗಾಯಿಸಿದ್ದರು. 11ನೇ ಕಂತಿಗೆ, ರೈತರು ಇ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ. ಇಲ್ಲದಿದ್ದರೆ ಹಣವನ್ನು ಪಡೆಯುವಲ್ಲಿ ತೊಂದರೆ ಎದುರಿಸಬೇಕಾಗುತ್ತದೆ.

ನೀವು ಪಿಎಂ ಕಿಸಾನ್ ಇ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಯಸುತ್ತಿದ್ದರೆ, ಕೆಳಗಿನ ಹಂತ ಹಂತದ ಪ್ರಕ್ರಿಯೆಯನ್ನು ಪರಿಶೀಲಿಸಬಹುದು.

– ಅಧಿಕೃತ PM ಕಿಸಾನ್ ವೆಬ್‌ಸೈಟ್ https://pmkisan.gov.in/ ಗೆ ಭೇಟಿ ನೀಡಿ

– ಬಲಭಾಗದಲ್ಲಿ ಮುಖಪುಟದ ಕೆಳಗೆ, ರೈತರ ಕಾರ್ನರ್ ಅನ್ನು ಒತ್ತಿರಿ

– ಅದರ ಕೆಳಗೆ ಇ ಕೆವೈಸಿ ಕಾಣಿಸಿಕೊಳ್ಳುತ್ತದೆ.

– ಅಲ್ಲಿ ಆಧಾರ್‌ ನಂಬರ್‌ ಎಂಟ್ರಿ ಮಾಡಿ ಕ್ಯಾಪ್ಚಾ ಕೋಡ್‌ ನಮೂದಿಸಿ. ಸರ್ಚ್‌ ಕೊಡಿ

-‌ ಈಗ ಆಧಾರ್‌ ಗೆ ನೋಂದಾಯಿಸಿದ ಮೊಬೈಲ್ ನಂಬರ್‌ ಎಂಟ್ರಿ ಮಾಡಿದರೆ ಅದಕ್ಕೆ ಓಟಿಪಿ ಬರುತ್ತದೆ.

– ಒಟಿಪಿ ಎಂಟ್ರಿ ಮಾಡಿ ಸಬ್‌ ಮಿಟ್‌ ಬಟನ್‌ ಒತ್ತುತ್ತಿದ್ದಂತೆಯೇ ಇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

PM Kisan 11th installment coming soon: Check process to do e-KYC, without which money won’t be credited

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...