ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿಯ 10ನೇ ಕಂತಿನ ಹಣ ಫಲಾನುಭವಿ ರೈತರ ಖಾತೆಗಳಿಗೆ ಡಿಸೆಂಬರ್ 15ರಂದು ವರ್ಗಾವಣೆಯಾಗಲಿದೆ.
ಮೇಲ್ಕಂಡ ಯೋಜನೆಯಡಿ ರೈತರಿಗೆ ಪ್ರತಿ ವರ್ಷವೂ ನಗದಿನ ರೂಪದಲ್ಲಿ ತಲಾ 6000 ರೂ.ಗಳ ಬೆಂಬಲಧನ ನೀಡಲಾಗುತ್ತದೆ. ಈ ನೆರವಿನ ಧನವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ವರ್ಷದ ಮೊದಲ ಕಂತನ್ನು ಏಪ್ರಿಲ್-ಜುಲೈ; ಎರಡನೇ ಕಂತನ್ನು ಆಗಸ್ಟ್-ನವೆಂಬರ್ ಹಾಗೂ ಮೂರನೇ ಕಂತನ್ನು ಡಿಸೆಂಬರ್-ಮಾರ್ಚ್ ನಡುವೆ ಬಿಡುಗಡೆ ಮಾಡಲಾಗುತ್ತದೆ.
ತಮ್ಮ ಬ್ಯಾಂಕ್ ಖಾತೆಗಳನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿಕೊಂಡಿರುವ ರೈತರ ಖಾತೆಗಳಿಗೆ ಈ ಹಣ ವರ್ಗಾವಣೆಯಾಗಲಿದೆ. ಈ ಹಿಂದೆ ಆಧಾರ್ ಲಿಂಕ್ ಆಗದೇ ಇರುವ ಕಾರಣದಿಂದ ಯೋಜನೆಗೆ ಸರಿಯಾಗಿ ನೋಂದಣಿಯಾಗದೇ ಇರುವ ರೈತರ ಖಾತೆಗಳಿಗೆ ಹಣ ವರ್ಗಾವಣೆಯಾಗುತ್ತಿರಲಿಲ್ಲ.
ಒಂದು ವೇಳೆ ನೀವು ನೀಡಿರುವ ಆಧಾರ್ ಸಂಖ್ಯೆ ಸರಿಯಿಲ್ಲ ಎನಿಸಿದರೆ ನೀವು ಪಿಎಂ ರೈತರ ಪೋರ್ಟಲ್‌ಗೆ ಭೇಟಿ ನೀಡಿ ಸರಿಪಡಿಸಬಹುದಾಗಿದೆ. ಇದಕ್ಕಾಗಿ ಕೆಳಕಂಡ ಕ್ರಮಗಳನ್ನು ಅನುಸರಿಸಿ:
1. PM Kisan ಜಾಲತಾಣಕ್ಕೆ ಭೇಟಿ ನೀಡಿ.
2. ಮೇಲಿನ ಭಾಗದಲ್ಲಿ ’Farmers Corner’ ಲಿಂಕ್ ಕಾಣುತ್ತದೆ, ಇದರ ಮೇಲೆ ಕ್ಲಿಕ್ ಮಾಡಿ.
3. ’Aadhaar edit’ ಲಿಂಕ್ ಮೇಲೆ ಕ್ಲಿಕ್ ಮಾಡಿ.
4. ನಿಮ್ಮ ಪುಟ ತೆರೆದುಕೊಳ್ಳಲಿದ್ದು, ನಿಮ್ಮ ಆಧಾರ್ ಸಂಖ್ಯೆ ಪತ್ತೆ ಮಾಡಿ, ತಪ್ಪಾಗಿದ್ದಲ್ಲಿ ಅದನ್ನು ಸರಿಪಡಿಸಿ.
ಇದೇ ವೇಳೆ, ನಿಮ್ಮ ಬ್ಯಾಂಕ್ ಖಾತೆಯ ವಿವರಗಳು ತಪ್ಪಾಗಿದ್ದಲ್ಲಿ ನೀವು ಅದನ್ನು ಸರಿಪಡಿಸಬಹುದಾಗಿದೆ. ಆದರೆ ಇದಕ್ಕಾಗಿ ನೀವು ಕೃಷಿ ಇಲಾಖೆಯ ಕಾರ್ಯಾಲಯ ಅಥವಾ ಲೇಖಪಾಲರನ್ನು ಭೇಟಿ ಮಾಡಬೇಕು.