ದೇಶದ ಪ್ರತಿಯೊಬ್ಬ ನಾಗರಿಕರು ಕೂಡ ಸ್ವಂತ ವಾಸಕ್ಕಾಗಿ ಮನೆಯೊಂದನ್ನು ಹೊಂದಿರಬೇಕು ಎನ್ನುವ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ’’ ಹೌಸಿಂಗ್ ಫಾರ್ ಆಲ್ ಬೈ 2022’’ ಯೋಜನೆ ಜಾರಿಗೆ ತಂದರು. 2016ರ ನ.20 ರಂದು ಪಿಎಂಎವೈ-ಜಿ ಅಂದರೆ ಪ್ರಧಾನಮಂತ್ರಿ ಆವಾಸ್ ಗ್ರಾಮೀಣ ಯೋಜನೆ ಅಡಿಯಲ್ಲಿ ಮನೆಗಳ ನಿರ್ಮಾಣ ಆರಂಭಿಸಲಾಯಿತು. ಇದುವರೆಗೂ ಈ ಯೋಜನೆ ಅಡಿಯಲ್ಲಿ ಸರಕಾರದಿಂದ ಹಣದ ನೆರವು ಪಡೆದು ಸ್ವಂತ ಮನೆ ಕಟ್ಟಿಕೊಂಡಿರುವವರು ಸುಮಾರು 1.26 ಕೋಟಿ ಮಂದಿ.
ಸಮತಟ್ಟಾದ ಪ್ರದೇಶದಲ್ಲಿ ವಾಸಿಸುವವರಿಗೆ 1.20 ಲಕ್ಷ ರೂ., ಗುಡ್ಡಗಾಡುಗಳಲ್ಲಿ ವಾಸಿಸುವವರಿಗೆ 1.30 ಲಕ್ಷ ರೂ. ಮನೆ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು ನೀಡುತ್ತಿದೆ. ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳು, ಲಡಾಕ್‌ನಲ್ಲಿನ ಜನರ ಅನುಕೂಲಕ್ಕೆ ಈ ಯೋಜನೆ ಜಾರಿಗೆ ತರಲಾಗಿದೆ.
ಸಚಿವ ಸುಧಾಕರ್ ಗೆ ಪ್ರಿಯಾಂಕ್ ಖರ್ಗೆ ಟಾಂಗ್: HM ಅಂದ್ರೆ ಹೋಮ್ ಮಿನಿಸ್ಟರ್ ಅನ್ನಬೇಕಾ? ಹೆಲ್ತ್ ಮಿನಿಸ್ಟರ್ ಅನ್ನಬೇಕಾ? ಎಂದು ಪ್ರಶ್ನೆ
ಈ ಯೋಜನೆಯ ಮೊದಲ ಕಂತು ತ್ರಿಪುರಾದ ಜನರಿಗೆ ಭಾನುವಾರ ತಲುಪಲಿದೆ. ಅದು ಕೂಡ ಅರ್ಹ ಫಲಾನುಭವಿಗಳಾದ 1.47 ಲಕ್ಷ ಜನರಿಗೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ. ಒಟ್ಟಾರೆ 2800 ಕೋಟಿ ರೂ.ಹಣವನ್ನು ತ್ರಿಪುರಾಗೆ ಪಿಎಂಎವೈ-ಜಿ ಅಡಿಯಲ್ಲಿ ಹಂಚಿಕೆ ಮಾಡಲಾಗಿದೆ. ಆ ಪೈಕಿ ಮೊದಲ ಕಂತಿನಲ್ಲಿ 709 ಕೋಟಿ ರೂ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಲಿದೆ.
ಈ ಹಣದಿಂದ ಜನರು ಪುಕ್ಕಾ ಹೌಸ್ (ಸಣ್ಣ ಮನೆ) ನಿರ್ಮಿಸಿಕೊಂಡು ಸ್ವಾಭಿಮಾನದಿಂದ ಬದುಕಲು ನೆರವಾಗಲಿದೆ ಎನ್ನುವುದು ಸರಕಾರದ ಆಶಯವಾಗಿದೆ. ಈ ವರ್ಷದ ಜನವರಿಯಲ್ಲಿ ಪಿಎಂಎವೈ-ಜಿ ಅಡಿಯಲ್ಲಿ ಉತ್ತರಪ್ರದೇಶದ 6.1 ಲಕ್ಷ ಫಲಾನುಭವಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು 2,691 ಕೋಟಿ ರೂ. ಗಳನ್ನು ಹಂಚಿಕೆ ಮಾಡಿದ್ದರು. ಅದು ಕೂಡ, ಮೊದಲ ಹಂತದಲ್ಲಿ 5.30 ಲಕ್ಷ ಫಲಾನುಭವಿಗಳಿಗೆ ಹಣದ ನೆರವು ನೀಡಲಾಗಿದ್ದರೆ, ಎರಡನೇ ಹಂತದಲ್ಲಿ 80 ಸಾವಿರ ಫಲಾನುಭವಿಗಳಿಗೆ ಹಣ ಕೊಡಲಾಗಿತ್ತು.