ನವದೆಹಲಿ: ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಉಕ್ರೇನ್ ಗಡಿಗೆ ನಾಲ್ಕು ಸಚಿವರ ವಿಶೇಷ ತಂಡಗಳನ್ನು ಕಳುಹಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೊಮೇನಿಯಾ, ಮಾಲ್ಡೋವಾ, ಹಂಗೇರಿ, ಸ್ಲೋವಾಕಿಯಾ, ಪೋಲೆಂಡ್ ಗೆ ನಾಲ್ವರು ಸಚಿವರ ನೇತೃತ್ವದ ತಂಡಗಳು ತೆರಳಿವೆ.
ರೊಮೇನಿಯಾ ಮತ್ತು ಮಾಲ್ಡೋವಾಗೆ ಸಿಂಧಿಯಾ ನೇತೃತ್ವದ ತಂಡ ಭೇಟಿ ನೀಡಿದೆ. ಹಂಗೇರಿಗೆ ಹರದೀಪ್ ಸಿಂಗ್ ಪುರಿ, ಸ್ಲೋವಾಕಿಯಾಗೆ ಕಿರಣ್ ರಿಜಿಜು ತಂಡ ತೆರಳಿದೆ. ಪೋಲೆಂಡ್ ಗೆ ವಿ.ಕೆ. ಸಿಂಗ್ ನೇತಥ್ವದ ತಂಡ ತೆರಳಿದ್ದು, ಭಾರತೀಯರ ಏರ್ ಲಿಫ್ಟ್ ಗೆ ಕ್ರಮ ಕೈಗೊಳ್ಳಲಾಗಿದೆ.
8 ಸಾವಿರ ಜನ ಉಕ್ರೇನ್ ಬಿಟ್ಟಿದ್ದಾರೆ. ಉಕ್ರೇನ್ ಸರ್ಕಾರ ಭಾರತೀಯರಿಗೆ ರೈಲುಗಳ ವ್ಯವಸ್ಥೆ ಮಾಡಿದೆ. ರೈಲು ನಿಲ್ದಾಣಗಳಿಗೆ ತೆರಳಲು ಭಾರತೀಯರಿಗೆ ಸೂಚನೆ ನೀಡಲಾಗಿದೆ. ಭಾರತೀಯರ ರಕ್ಷಣೆಗೆ ನಮ್ಮ ಮೊದಲ ಆದ್ಯತೆ ನೀಡಲಾಗಿದ್ದು, ಏರ್ ಲಿಫ್ಟ್ ಕಾರ್ಯಾಚರಣೆ ವೇಗವಾಗಿ ಸಾಗುತ್ತಿದೆ. ಈವರೆಗೂ 1396 ಜನರನ್ನು ಸ್ಥಳಾಂತರ ಮಾಡಲಾಗಿದೆ. ಭಾರತೀಯರಿಗೆ ಊಟದ ವ್ಯವಸ್ತೇ ಮಾಡಲಾಗಿದೆ ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.