![](https://kannadadunia.com/wp-content/uploads/2021/11/17f4bd9d-19bb-469b-92f8-2f829e5971a0.jpg)
ಕೊರೊನಾ ದಾಳಿ, ಪ್ರವಾಹದ ನಂತರ ದಿಕ್ಕೆಟ್ಟಿರುವ ಜನಸಾಮಾನ್ಯರಿಗೆ ಕೇಂದ್ರ ಸರಕಾರದಿಂದ ಸಂತಸಸ ಸುದ್ದಿಯೊಂದು ಸಿಕ್ಕಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ ಪ್ರದೇಶ) ಅಡಿಯಲ್ಲಿ 3.61 ಲಕ್ಷ ಮನೆಗಳ ನಿರ್ಮಾಣ ಮತ್ತು ಹಂಚಿಕೆಗೆ ನಿರ್ಧರಿಸಲಾಗಿದೆ.
ಕೇಂದ್ರೀಯ ಮಂಜೂರಾತಿ ಮತ್ತು ನಿಗಾ ಸಮಿತಿಯ (ಸಿಎಸ್‌ಎಂಸಿ) 56ನೇ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಹಾಜರಿದ್ದ 17 ರಾಜ್ಯಗಳ ಸರಕಾರದ ಪ್ರತಿನಿಧಿಗಳಿಗೆ ಕೇಂದ್ರ ವಸತಿ ಮತ್ತು ನಗರಪ್ರದೇಶ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಅವರು ಕಿವಿಮಾತು ಹೇಳಿದ್ದು, ಶೀಘ್ರವೇ ಮನೆಗಳ ನಿರ್ಮಾಣಕ್ಕೆ ಅಡ್ಡಿಯಾಗಿರುವ ಎಲ್ಲ ಅಡೆತಡೆಗಳನ್ನು ಕಾನೂನಾತ್ಮಕವಾಗಿ ಇಲ್ಲವೇ ಸಂಧಾನ ಮಾತುಕತೆ ಮೂಲಕ ನಿವಾರಿಸಿಕೊಳ್ಳಲು ತಿಳಿಸಿದ್ದಾರೆ.
ಸಿಕ್ಕಿಬಿದ್ದ ಕಳ್ಳರಿಗೆ ವಿಚಿತ್ರ ಶಿಕ್ಷೆ…!
2022ನೇ ವರ್ಷಾಂತ್ಯದ ಒಳಗಾಗಿ ’ಸರ್ವರಿಗೂ ಸೂರು’ ಎಂಬ ಸಂಕಲ್ಪದ ಅಡಿಯಲ್ಲಿ ಪಿಎಂಎವೈ-ಯು ಅಡಿಯಲ್ಲಿ ಒಟ್ಟಾರೆಯಾಗಿ ಇದುವರೆಗೂ ದೇಶಾದ್ಯಂತ 1.14 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿದೆ. ಇವುಗಳ ಕಾಮಗಾರಿ ವಿವಿಧ ಹಂತಗಳಲ್ಲಿದೆ. ಈ ಪೈಕಿ ಸುಮಾರು 52.5 ಲಕ್ಷ ಮನೆಗಳನ್ನು ಕೇಂದ್ರ ಸರಕಾರವು ನಿರ್ಮಾಣ ಪೂರ್ಣಗೊಳಿಸಿ, ಫಲಾನುಭವಿಗಳಿಗೆ ಹಸ್ತಾಂತರಿಸಿದೆ.
ಪಿಎಂಎವೈ ಯೋಜನೆ ಅಡಿಯಲ್ಲಿ ಕೇಂದ್ರ ಸರಕಾರವು ಒಟ್ಟಾರೆ 1.85 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ. ಯೋಜನೆಯ ಪೂರ್ಣ ವೆಚ್ಚವು 7.52 ಲಕ್ಷ ಕೋಟಿ ರೂ. ಆಗಿದೆ. ಇದುವರೆಗೂ ಕೇಂದ್ರದಿಂದ 1.13 ಲಕ್ಷ ಕೋಟಿ ರೂ. ಬಿಡುಗಡೆಯಾಗಿದೆ. ಹೆಚ್ಚುವರಿಯಾಗಿ ಈಗಾಗಲೇ ಯೋಜನೆ ಅಡಿಯಲ್ಲಿ 14 ರಾಜ್ಯಗಳಿಗೆ ಮಂಜೂರಾಗಿರುವ 3.74 ಲಕ್ಷ ಮನೆಗಳ ನಿರ್ಮಾಣ ಸಂಬಂಧಿತ ಕೆಲವು ಪರಿಷ್ಕರಣೆಗಳನ್ನು ಕೂಡ ಇತ್ತೀಚಿನ ಸಭೆಯಲ್ಲಿ ಕೇಂದ್ರ ವಸತಿ ಸಚಿವಾಲಯವು ನಿವಾರಿಸಿಕೊಟ್ಟಿದೆ.