ದೇಶದಲ್ಲಿ ಕೊರೊನಾ ಅಬ್ಬರಿಸುತ್ತಿದ್ದ ಸಂದರ್ಭದಲ್ಲಿ ದೇಶವಾಸಿಗಳಿಗೆ ನೆರವಾಗುವ ಸಲುವಾಗಿ ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪಿಸಲಾಗಿತ್ತು. 2020 ರ ಮಾರ್ಚ್ ನಲ್ಲಿ ಆರಂಭವಾದ ಪಿಎಂ ಕೇರ್ಸ್ ಫಂಡ್ ಗೆ ಈ ವರ್ಷದ ಮಾರ್ಚ್ ವರೆಗೆ ಒಟ್ಟು 13,000 ಕೋಟಿ ರೂಪಾಯಿಗಳ ದೇಣಿಗೆ ಹರಿದು ಬಂದಿದೆ ಎಂದು ತಿಳಿದುಬಂದಿದೆ.
ಈ ಪೈಕಿ 7,700 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದು, ಇನ್ನು 5400 ಕೋಟಿ ರೂಪಾಯಿ ಉಳಿದಿದೆ. ಈ ನಿಧಿಯಿಂದ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಸ್ಥಾವರ ಸ್ಥಾಪನೆ, ಸರ್ಕಾರಿ ಆಸ್ಪತ್ರೆಗಳಿಗೆ ವೆಂಟಿಲೇಟರ್ ಪೂರೈಕೆ ಸೇರಿದಂತೆ ಹಲವು ಕಾರ್ಯಗಳಿಗೆ ವಿನಿಯೋಗಿಸಲಾಗಿದೆ.
ಪಿಎಂ ಕೇರ್ಸ್ ಫಂಡ್ ಗೆ ದೇಶವಾಸಿಗಳಿಂದ 7,183 ಕೋಟಿ ರೂಪಾಯಿಗಳು ಹಾಗೂ ವಿದೇಶಗಳಿಂದ 495 ಕೋಟಿ ರೂಪಾಯಿಗಳನ್ನು ಸ್ವೀಕರಿಸಲಾಗಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ವೈಯಕ್ತಿಕ ಆದಾಯದಿಂದ 2.25 ಲಕ್ಷ ರೂಪಾಯಿಗಳನ್ನು ಆರಂಭಿಕ ದೇಣಿಗೆಯಾಗಿ ನೀಡಿದ್ದಾರೆ.