
ರಾಖಿ ತ್ರಿಪಾಠಿ ಎಂಬವರು ಈ ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆಕೆಯ ತಂದೆ ವಿ.ಕೆ. ತ್ರಿಪಾಠಿ ತಮ್ಮ ಪಕ್ಕದಲ್ಲಿ ಕುಳಿತಿದ್ದ ಪತ್ನಿಗಾಗಿ ಘಜಲ್ ಗಾಯನ ಮಾಡಿದ್ದಾರೆ.
ವಿ.ಕೆ. ತ್ರಿಪಾಠಿ ತಮ್ಮ ಪತ್ನಿಯ ಜನ್ಮದಿನಾಚರಣೆಯ ಪ್ರಯುಕ್ತ ತಾಲತ್ ಅಝಿಜ್ ಗಾಯನದ ಖುದಾ ಕರೆ ಕಿ ಮೊಹಬ್ಬತ್ ಮೇ ಎಂಬ ಹಾಡನ್ನ ಗುನುಗಿದ್ದಾರೆ.
ಆದರೆ ಈ ವಿಡಿಯೋ ವೈರಲ್ ಆಗೋಕೆ ಪ್ರಮುಖ ಕಾರಣ ಇದಲ್ಲ. ಈ ಘಜಲ್ನ್ನ ವಿ.ಕೆ. ತ್ರಿಪಾಠಿ ಹಾಡುತ್ತಿದ್ದ ವೇಳೆ ಅವರ ಪತ್ನಿ ವ್ಯಕ್ತಪಡಿಸಿದ ಮುಖಭಾವ ವಿಡಿಯೋ ವೈರಲ್ ಆಗೋಕೆ ಕಾರಣವಾಗಿದೆ. ವಿ.ಕೆ. ತ್ರಿಪಾಠಿ ಪತ್ನಿಗಾಗಿ ಪ್ರೀತಿಯಿಂದ ಘಜಲ್ ಹಾಡುತ್ತಿದ್ದರೆ ಪತ್ನಿ ಮಾತ್ರ ಗಂಭೀರವಾಗಿ ಕುಳಿತುಕೊಂಡಿದ್ರು. ಕೊನೆಯಲ್ಲಿ ಪತಿಯ ಗಾಯನ ಕಂಡು ಪತ್ನಿ ನಕ್ಕಿದ್ದು ಈ ಕ್ಷಣ ವಿಡಿಯೋದ ಸೌಂದರ್ಯವನ್ನ ಇನ್ನಷ್ಟು ಹೆಚ್ಚಿಸಿದೆ.
ಇಂದು ನನ್ನ ಮಾತೃಶ್ರೀಯವರ ಜನ್ಮ ದಿನ. ಅಪ್ಪಾ ಅಷ್ಟು ಚೆನ್ನಾಗಿ ಘಜಲ್ ಗಾಯನ ಮಾಡುತ್ತಿದ್ದಾರೆ. ಆದರೆ ಅಮ್ಮ ಗಂಭೀರವಾಗಿ ಕುಳಿತಿದ್ದಾರೆ. ಅಮ್ಮಾ, ಪಪ್ಪ ನಿನಗಾಗಿ ಹಾಡನ್ನ ಹಾಡುತ್ತಿದ್ದಾರೆ. ಈ ರೀತಿ ಮುಖ ಮಾಡಿ ಕೂರಬೇಡ. ಈ ವಯಸ್ಸಾದವರಿಗೆ ಏನು ಹೇಳೋದು ಎಂದು ಶೀರ್ಷಿಕೆ ನೀಡಿದ್ದಾರೆ.
ಈ ಮುದ್ದಾದ ವಿಡಿಯೋ ಟ್ವಿಟರ್ನಲ್ಲಿ ಸಖತ್ ರೌಂಡ್ಸ್ ಹಾಕ್ತಿದೆ ಈಗಾಗಲೇ 23 ಸಾವಿರಕ್ಕೂ ಅಧಿಕ ವೀವ್ಸ್ ಹಾಗೂ 1200ಕ್ಕೂ ಅಧಿಕ ಲೈಕ್ಸ್ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.