ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ‘ಬೇಷರಂ ರಂಗ್’ ಹಾಡು ಭಾರಿ ವಿವಾದ ಸೃಷ್ಟಿಸಿದ್ದು, ಈ ಹಾಡಿನಿಂದ ಚಿತ್ರವನ್ನೇ ಬಾಯ್ಕಾಟ್ ಮಾಡಲಾಗುತ್ತಿದೆ. ದೀಪಿಕಾ ಉದ್ದೇಶಪೂರ್ವಕವಾಗಿ ಕೇಸರಿ ಬಣ್ಣದ ಬಿಕಿನಿ ತೊಟ್ಟು ಬೇಷರಮ್ ರಂಗ್ ಎಂದು ಹೇಳಿರುವುದು ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ.
ಅದೇನೆ ಇರಲಿ, ಈಗ ವಿಷಯ ಏನು ಎಂದರೆ, ಇಲ್ಲೊಬ್ಬಳು ದೀಪಿಕಾಳನ್ನು ಮೀರಿಸುವಂತೆ ಈ ಹಾಡಿಗೆ ನೃತ್ಯ ಮಾಡಿದ್ದು ಭಾರಿ ವೈರಲ್ ಆಗಿದೆ. ತನ್ವಿ ಗೀತಾ ರವಿಶಂಕರ್ ಅವರು ಹಾಡಿರುವ ಬೇಷರಮ್ ರಂಗ್ ಗೆ ದೀಪಿಕಾಳಂತೆಯೇ ಬಿಕಿನಿ ತೊಟ್ಟು ನೃತ್ಯ ಮಾಡಿರುವ ಇಡಿಯೋ ಇದಾಗಿದೆ.
ಆದರೆ ಇಲ್ಲಿ ಒಂದು ವ್ಯತ್ಯಾಸವೆಂದರೆ ದೀಪಿಕಾ ಜೀರೋ ಸೈಜ್ ಆಗಿದ್ದರೆ, ಈ ವೈರಲ್ ವಿಡಿಯೋದಲ್ಲಿ ಇರುವ ಮಹಿಳೆ ಪ್ಲಸ್ ಪ್ಲಸ್ ಸೈಜ್ನವಳು. ಬಿಕಿನಿ ತೊಟ್ಟು ದೀಪಿಕಾಳಂತೆ ತನ್ನ ಅಂಗಾಂಗ ಪ್ರದರ್ಶಿಸುತ್ತಾ ನೃತ್ಯ ಮಾಡಿ ಅದನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾಳೆ. ಇದಕ್ಕೆ ಸಿಕ್ಕಾಪಟ್ಟೆ ಕಮೆಂಟ್ಗಳು ಬರುತ್ತಿವೆ.