ಮೋದಿಜೀ, ನೀವು ಎಲ್ಲರ ಮಾತನ್ನೂ ಕೇಳ್ತೀರಿ ನನ್ನ ಮಾತನ್ನೂ ಕೇಳಿ ಎಂದು ಶಾಲಾ ಬಾಲಕಿ ಪ್ರಧಾನಿ ಮೋದಿ ಬಳಿ ಉತ್ತಮ ಶಾಲಾ ಕಟ್ಟಡಕ್ಕಾಗಿ ಮನವಿ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೊದಲ್ಲಿ, ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಲೋಹೈ-ಮಲ್ಹಾರ್ ಗ್ರಾಮದ ಪುಟ್ಟ ಬಾಲಕಿ ಸೀರತ್ ನಾಜ್ ತನ್ನ ಶಾಲೆಯಲ್ಲಿ ಸ್ನೇಹಿತರ ಜೊತೆಗೆ ಅಶುಚಿಯಾದ ನೆಲದ ಮೇಲೆ ಕುಳಿತುಕೊಳ್ಳಲು ಇಷ್ಟವಾಗದೇ ತಮಗೊಂದು ಉತ್ತಮ ಶಾಲೆ ನಿರ್ಮಿಸಿಕೊಡಿ ಮೋದಿಜೀ ಎಂದು ವಿಡಿಯೋ ಮಾಡಿದ್ದಾಳೆ.
ಶಾಲಾ ವಿದ್ಯಾರ್ಥಿನಿಯು ತನ್ನನ್ನು ಸ್ಥಳೀಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಎಂದು ಪರಿಚಯಿಸಿಕೊಳ್ಳುವ ಮೂಲಕ 4ನಿಮಿಷ 34 ಸೆಕೆಂಡ್ ನ ವಿಡಿಯೋದಲ್ಲಿ ತನ್ನ ಶಾಲೆಯ ಸ್ಥಿತಿಯನ್ನ ತೋರಿಸ್ತಾ ನಮಗೊಂದು ಉತ್ತಮ ಶಾಲೆ ನಿರ್ಮಿಸಿಕೊಡಿ ಎಂದು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾಳೆ.
ನಾವು ಶಾಲೆಯ ಹೊರಭಾಗ ಕೆಟ್ಟದಾಗಿರುವ ಈ ನೆಲದ ಮೇಲೆ ಕುಳಿತುಕೊಳ್ಳುತ್ತೇವೆ. ಇಲ್ಲಿ ಕುಳಿತುಕೊಳ್ಳೋದರಿಂದ ನನ್ನ ಸಮವಸ್ತ್ರ ಕೊಳೆಯಾಗುತ್ತದೆ. ಅದಕ್ಕಾಗಿ ಅಮ್ಮ ಹೊಡೆಯುತ್ತಾಳೆ ಎಂದೆಲ್ಲಾ ಶಾಲೆಯ ಸ್ಥಿತಿಯ ಬಗ್ಗೆ ವಿಡಿಯೋದಲ್ಲಿ ಶಾಲಾ ಬಾಲಕಿ ಹೇಳಿದ್ದಾಳೆ. ಜಮ್ಮು ಮತ್ತು ಕಾಶ್ಮೀರದ ‘ಮಾರ್ಮಿಕ್ ನ್ಯೂಸ್’ ಹೆಸರಿನ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.