alex Certify ʼಹೇರಾ ಫೇರಿʼ ಹಾಡಿಗೆ ಪುಟಾಣಿಗಳ ಅದ್ಭುತ ಡಾನ್ಸ್: ಮಂತ್ರಮುಗ್ದರನ್ನಾಗಿಸುತ್ತೆ ವಿಡಿಯೋ | Watch | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹೇರಾ ಫೇರಿʼ ಹಾಡಿಗೆ ಪುಟಾಣಿಗಳ ಅದ್ಭುತ ಡಾನ್ಸ್: ಮಂತ್ರಮುಗ್ದರನ್ನಾಗಿಸುತ್ತೆ ವಿಡಿಯೋ | Watch

ಜಮ್‌ಶೆಡ್‌ಪುರದ ಪುಟಾಣಿ ಮಕ್ಕಳ ಗುಂಪೊಂದು “ಫಿರ್ ಹೇರಾ ಫೇರಿ” ಸಿನಿಮಾದ “ಆಯೇ ಮೇರಿ ಜೋಹ್ರಾಜಬೀನ್” ಹಾಡನ್ನು ಮರುಸೃಷ್ಟಿಸಿ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಕಿಡ್ ಅಕಾಡೆಮಿ ಪ್ಲೇ ಸ್ಕೂಲ್‌ನಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಮಕ್ಕಳು ತಿಳಿ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ, ಜನಪ್ರಿಯ ಹಾಡಿನಲ್ಲಿರುವ ನಟರ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ. ಆದರೆ ನಿಜವಾದ ಗಮನ ಸೆಳೆದಿದ್ದು ಯಾರು ಗೊತ್ತಾ ? ಕನ್ನಡಕ ಮತ್ತು ಟವೆಲ್ ಧರಿಸಿರುವ ಪುಟ್ಟ ಬಾಬು ರಾವ್….! ಅವರು ಅತಿ ಮುದ್ದಾದ ಬಾಬು ಭಯ್ಯನ ಪಾತ್ರವನ್ನು ಮಾಡಿದ್ದಾರೆ.

ಮಕ್ಕಳು ಕೇವಲ ನೃತ್ಯ ಮಾಡಿಲ್ಲ; ಬದಲಾಗಿ ಪಾತ್ರಗಳಲ್ಲಿ ಜೀವಿಸಿದ್ದಾರೆ. ಪುಟ್ಟ ಮಕ್ಕಳು ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ, ಬಿಪಾಶಾ ಬಸು, ರಿಮಿ ಸೇನ್ ಮತ್ತು ಪರೇಶ್ ರಾವಲ್ ಅವರಂತೆ ನಟಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಪ್ರದರ್ಶನವನ್ನು ಮೆಚ್ಚಿಕೊಂಡಿದ್ದು, ಅದರಲ್ಲೂ ಪುಟ್ಟ ಬಾಬು ರಾವ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಬಾಬು ರಾವ್ ಗಣಪತ್ ರಾವ್ ಆಪ್ಟೆ ಅಕಾ ಬಾಬು ಭಯ್ಯ ಈ ಕಾರ್ಯಕ್ರಮದ ಮುಖ್ಯ ಅಂಶ. ಆದರೆ ಈ ಮಕ್ಕಳೆಲ್ಲರೂ ಚೆನ್ನಾಗಿ ಮಾಡಿದ್ದಾರೆ” ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ.

“ಎಲ್ಲಾ ಮುದ್ದುಗಳು ಒಂದೇ ಫ್ರೇಮ್‌ನಲ್ಲಿ” ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು. “ಇವರು ಎಷ್ಟು ಮುದ್ದಾಗಿದ್ದಾರೆ” ಎಂದು ಇನ್ನೊಬ್ಬರು ಸೇರಿಸಿದ್ದಾರೆ.

 

View this post on Instagram

 

A post shared by KIDCADEMY A PLAY SCHOOL (@kid.cademy)

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...