ಇನ್ನೇನು ದೀಪಾವಳಿ ಸಮೀಪಿಸುತ್ತಿದೆ, ಉತ್ಸಾಹವು ಪ್ರಾರಂಭವಾಗುತ್ತಿದ್ದಂತೆ ಕೆಲಸ ಅಥವಾ ಓದಿನ ಉದ್ದೇಶಕ್ಕೆ ಮನೆಯಿಂದ ದೂರವಿರುವವರು ತಮ್ಮ ಕುಟುಂಬಗಳೊಂದಿಗೆ ಹಬ್ಬ ಆಚರಿಸಲು ಊರುಗಳಿಗೆ ಪ್ರಯಾಣಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಎರಡು ವರ್ಷಗಳ ಕೋವಿಡ್-19 ನಿರ್ಬಂದದ ಬಳಿಕ ಈ ಬಾರಿ ಅಡೆತಡೆ ಇಲ್ಲದೇ ಊರು ತಲುಪಬಹುದು. ಈ ವರ್ಷ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಲಿದೆ ಎಂಬ ಅಂಶವನ್ನು ಪರಿಗಣಿಸಿ, ಭಾರತೀಯ ರೈಲ್ವೆಯು ಹಬ್ಬದ ಅವಧಿಯಲ್ಲಿ ತನ್ನ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೆಲವು ಸಲಹೆಯನ್ನು ನೀಡಿದೆ.
ಸಲಹೆಯ ಪ್ರಕಾರ,
– ಪ್ರಯಾಣಿಕರು ಕೆಲವು ವಸ್ತುಗಳನ್ನು ರೈಲುಗಳಲ್ಲಿ ಸಾಗಿಸಲು ಅನುಮತಿಸಲಾಗುವುದಿಲ್ಲ:
ಪೆಟ್ರೋಲ್, ಡೀಸೆಲ್, ಪಟಾಕಿ ಮುಂತಾದ ಯಾವುದೇ ದಹನಕಾರಿ ವಸ್ತುಗಳು.
– ಒಲೆ, ಗ್ಯಾಸ್ ಸಿಲಿಂಡರ್
– ಕಂಪಾರ್ಟ್‌ಮೆಂಟ್‌ನಲ್ಲಿ ಅಥವಾ ರೈಲಿನಲ್ಲಿ ಎಲ್ಲಿಯೂ ಸಿಗರೇಟ್ ಬಳಕೆ ಮಾಡುವಂತಿಲ್ಲ ನಿಷೇಧಿತ ವಸ್ತುಗಳ ಸಮಗ್ರ ಪಟ್ಟಿಯನ್ನು ಸಹ ನೀಡಲಾಗಿದೆ.
ಮೇಲೆ ತಿಳಿಸಲಾದ ಯಾವುದೇ ಸರಕುಗಳನ್ನು ಸಾಗಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.ಈ ನಿರ್ಬಂಧಗಳನ್ನು ಅನುಸರಿಸಲು ವಿಫಲರಾದವರು ಜೈಲು ಶಿಕ್ಷೆಯನ್ನು ಅನುಭವಿಸುವ ಅಥವಾ ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ.
ರೈಲ್ವೇ ಕಾಯಿದೆ 1989ರ ಸೆಕ್ಷನ್ 164 ಮತ್ತು 165 ರ ಅಡಿಯಲ್ಲಿ, ಪಟಾಕಿ, ಸ್ಟೌವ್, ಗ್ಯಾಸ್ ಮತ್ತು ಪೆಟ್ರೋಲ್‌ನಂತಹ ದಹನಕಾರಿ ವಸ್ತುಗಳೊಂದಿಗೆ ರೈಲಿನಲ್ಲಿ ಪ್ರಯಾಣಿಸುವುದು ಕಂಡುಬಂದರೆ ಅವರಿಗೆ 1,000 ರೂಪಾಯಿ ದಂಡ ವಿಧಿಸಬಹುದು. ಇದಲ್ಲದೆ, ಪ್ರಯಾಣಿಕರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.