ನೀವು ಅರಬ್ ರಾಷ್ಟ್ರಕ್ಕೆ ಪ್ರವಾಸಕ್ಕೆ ಹೋಗಬೇಕೆಂದುಕೊಂಡಿದ್ದೀರಾ..? ಹೌದು ಎಂದಾದರೆ ಎನ್ಪಿಸಿಐ ನಿಮಗೊಂದು ಸಿಹಿ ಸುದ್ದಿಯನ್ನು ನೀಡಿದೆ. NPCI ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (NIPL), NPCI ಯ ಅಂತರಾಷ್ಟ್ರೀಯ ಅಂಗಸಂಸ್ಥೆ, BHIM UPI ಈಗ UAE ಯಾದ್ಯಂತ NEOPAY ಟರ್ಮಿನಲ್‌ಗಳಲ್ಲಿ ಲಭ್ಯವಿದೆ ಎಂದು ಘೋಷಿಸಿದೆ.
ಇದರಿಂದಾಗಿ ಭಾರತೀಯ ಪ್ರವಾಸಿಗರಿಗೆ BHIM UPI ಅನ್ನು ಬಳಸಿಕೊಂಡು ಖರೀದಿಯನ್ನು ಮಾಡಲು ಸಾಧ್ಯವಾಗುತ್ತದೆ. BHIM UPI ಭಾರತೀಯ ನಾಗರಿಕರ ಪಾವತಿಯ ಆದ್ಯತೆಯ ಮಾರ್ಗವಾಗಿದೆ ಎಂದು NIPL ಸಿಇಒ ರಿತೇಶ್ ಶುಕ್ಲಾ ಹೇಳಿದ್ದಾರೆ.
ಚಾಲಕನ ಬಳಿ ಡಿಎಲ್ ಇಲ್ಲದಿದ್ದರೂ ವಿಮೆ ಕಂಪನಿ ಪರಿಹಾರ ಪಾವತಿಸಿ ಬಳಿಕ ವಾಹನ ಮಾಲೀಕನಿಂದ ವಸೂಲಿ ಮಾಡಬೇಕು: ಅಪಘಾತ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ
NIPL Mashreq ಬ್ಯಾಂಕ್‌ನ ಪಾವತಿ ವಿಭಾಗವಾದ NEOPAY ನೊಂದಿಗೆ ಸಹಯೋಗವನ್ನು ಹೊಂದಿದೆ, ಇದರ ಮೂಲಕ ಭಾರತೀಯ ನಾಗರಿಕರು BHIM UPI ಅನ್ನು ಬಳಸಿಕೊಂಡು ದೇಶದಲ್ಲಿ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ ?
ಅರಬ್ ರಾಷ್ಟ್ರಗಳಲ್ಲಿ ಯುಪಿಐ ಬಳಸಿಕೊಂಡು ವಹಿವಾಟು ನಡೆಸಲು ಬಳಕೆದಾರರು ಯುಪಿಐ ಸಕ್ರಿಯವಾಗಿರುವ ಭಾರತದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಜನರು BHIM ನಂತಹ UPI ಪಾವತಿಗಳನ್ನು ಬೆಂಬಲಿಸುವ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅನ್ನು ಸಹ ಹೊಂದಿರಬೇಕು.
ಭಾರತದಿಂದ ನಿಯಮಿತವಾಗಿ ಅರಬ್ ರಾಷ್ಟ್ರಗಳಿಗೆ ಬೇಟಿ ನೀಡುವ ಸಾವಿರಾರು ಭಾರತೀಯ ಪ್ರವಾಸಿಗರು ಈ ಹೊಸ ಸೌಕರ್ಯದಿಂದಾಗಿ ಅರಬ್ ರಾಷ್ಟ್ರದಲ್ಲಿಯೂ ಸುರಕ್ಷಿತವಾಗಿ ಹಾಗೂ ತಡೆರಹಿತ ವ್ಯವಹಾರಗಳನ್ನು ನಡೆಸಲು ಸುಲಭವಾಗುತ್ತದೆ ಎಂದು NEOPAY ನ ಸಿಇಒ ವಿಭೋರ್ ಮುಂಧಾಡಾ ಹೇಳಿದರು.