ಸಾಮಾನ್ಯವಾಗಿ ಯಾರೇ ಆಗಲಿ ಆಸ್ತಿಯನ್ನು ಖರೀದಿಸಿದಾಗ ಅದನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಬೇಕು. ನೋಂದಣಿಗಾಗಿ ಸರ್ಕಾರವು ವಿವಿಧ ದಾಖಲೆಗಳನ್ನು ಕೇಳುತ್ತದೆ. ಅದನ್ನು ಮಾರಾಟಗಾರ ಮತ್ತು ಖರೀದಿದಾರರಿಬ್ಬರೂ ಒದಗಿಸಬೇಕು. ನೋಂದಣಿ ಶುಲ್ಕವನ್ನು ಸ್ಥಳ ಮತ್ತು ಆಸ್ತಿಯ ಪ್ರಕಾರದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಭೂ ನೋಂದಣಿಯು ಒಬ್ಬ ವ್ಯಕ್ತಿಯ ಭೂಮಿಯನ್ನು ಇನ್ನೊಬ್ಬ ವ್ಯಕ್ತಿಯ ಹೆಸರಿಗೆ ವರ್ಗಾಯಿಸುವ ಕಾನೂನು ಪ್ರಕ್ರಿಯೆ. ಭಾರತ ಸರ್ಕಾರವು ಭೂ ನೋಂದಣಿಯ ಉಸ್ತುವಾರಿಯನ್ನು ಹೊಂದಿದೆ. ಭೂ ನೋಂದಾವಣೆಗೆ ಸರ್ಕಾರದ ನಿಗದಿತ ಶುಲ್ಕವನ್ನು ವಿಧಿಸುತ್ತದೆ, ಇದು ಭೂಮಿಯ ಬೆಲೆಯನ್ನು ಆಧರಿಸಿರುತ್ತದೆ. ನೋಂದಾವಣೆ ಶುಲ್ಕಗಳ ಬಗ್ಗೆ ನಿಮಗೆ ತಿಳಿದಿರುವುದು ಮುಖ್ಯವಾಗುತ್ತದೆ. ಇಲ್ಲದಿದ್ದರೆ ಅನೇಕರಿಗೆ ಅದರ ಸಂಪೂರ್ಣ ಜ್ಞಾನದ ಕೊರತೆಯಿಂದ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ.
ಸ್ಟ್ಯಾಂಪ್ ಡ್ಯೂಟಿ ಶುಲ್ಕವು ಭೂ ನೋಂದಣಿಗೆ ಖರ್ಚು ಮಾಡಿದ ಹಣದ ಪ್ರಮುಖ ಅಂಶವಾಗಿದೆ. ಅಂದರೆ ಸರ್ಕಾರವು ಮುದ್ರೆ ಬಳಕೆಯ ಮೂಲಕ ಭೂ ನೋಂದಣಿಯ ವೆಚ್ಚವನ್ನು ಕಡಿತಗೊಳಿಸುತ್ತದೆ. ಭೂಮಿಯ ವಿಧದ ಮೇಲೆ ವಿವಿಧ ಸ್ಟ್ಯಾಂಪ್ ಸುಂಕಗಳನ್ನು ಪಾವತಿಸಬೇಕಾಗುತ್ತದೆ. ಉದಾಹರಣೆಗೆ ಒಂದು ಕುಗ್ರಾಮದಲ್ಲಿ ಭೂಮಿಯನ್ನು ಖರೀದಿಸಲು ಕಡಿಮೆ ಶುಲ್ಕ ಮತ್ತು ನಗರದಲ್ಲಿ ಭೂಮಿಯನ್ನು ಖರೀದಿಸಲು ಹೆಚ್ಚಿನ ಶುಲ್ಕವಿದೆ. ಈ ಸ್ಟ್ಯಾಂಪ್ ಡ್ಯೂಟಿ ಶುಲ್ಕವನ್ನು ಭೂಮಿಯ ಸ್ಥಳೀಯ ಮಾರಾಟ ದರ ಅಥವಾ ಸರ್ಕಾರಿ ದರಕ್ಕೆ ಪಾವತಿಸಬೇಕು.
ಸ್ಟ್ಯಾಂಪ್ ಡ್ಯೂಟಿ ದರಗಳನ್ನು ರಾಜ್ಯ ಸರ್ಕಾರಗಳು ನಿಗದಿಪಡಿಸುತ್ತವೆ. ಹೀಗಾಗಿ ಇದು ದೇಶಾದ್ಯಂತ ಒಂದು ರಾಜ್ಯದಿಂದ ಮತ್ತೊಂದು ರಾಜ್ಯದಲ್ಲಿ ಬೇರೆ ಬೇರೆ ರೀತಿಯದ್ದಾಗಿರುತ್ತದೆ. ಆದರೆ ಇದು ಆಸ್ತಿಯ ಮೌಲ್ಯದ 3% ಮತ್ತು 10% ರ ನಡುವೆ ಇರುತ್ತದೆ. ಆಸ್ತಿಯ ಮೇಲಿನ ಮುದ್ರಾಂಕ ಶುಲ್ಕದ ಜೊತೆಗೆ ನೀವು ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇವುಗಳನ್ನು ಸಾಮಾನ್ಯವಾಗಿ ಕೇಂದ್ರ ಸರ್ಕಾರವು ಸಂಗ್ರಹಿಸುತ್ತದೆ ಮತ್ತು ರಾಜ್ಯಗಳಾದ್ಯಂತ ಏಕರೂಪವಾಗಿರುತ್ತದೆ. ನೋಂದಣಿ ವೆಚ್ಚವು ಸಾಮಾನ್ಯವಾಗಿ ಆಸ್ತಿಯ ಸಂಪೂರ್ಣ ಮಾರುಕಟ್ಟೆ ಮೌಲ್ಯದ 1% ಆಗಿದೆ.
ಉದಾಹರಣೆಗೆ ಒಬ್ಬ ವ್ಯಕ್ತಿಯು ದೆಹಲಿಯಲ್ಲಿ 60 ಲಕ್ಷ ರೂಪಾಯಿ ಆಸ್ತಿಯನ್ನು ಖರೀದಿಸಲು ಬಯಸಿದರೆ, ಅಲ್ಲಿ ಸ್ಟ್ಯಾಂಪ್ ಡ್ಯೂಟಿ ದರವು 6% ಆಗಿದ್ದರೆ ಆತ ಸ್ಟ್ಯಾಂಪ್ ಡ್ಯೂಟಿಯಲ್ಲಿ ರೂ. 3.6 ಲಕ್ಷ ಮತ್ತು ನೋಂದಣಿ ಶುಲ್ಕದಲ್ಲಿ ರೂ. 60,000 ಪಾವತಿಸಬೇಕು.