ಭಾರತದ ಮಾರುಕಟ್ಟೆಗೆ ಅನೇಕ ಕಂಪನಿಗಳ ದ್ವಿಚಕ್ರ ವಾಹನಗಳು ಬಂದಿದೆ. 2001 ರಿಂದ ಇಲ್ಲಿಯವರೆಗೆ ಹೋಂಡಾ ಆಕ್ಟಿವಾ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನಗಳಲ್ಲಿ ಒಂದಾಗಿದೆ. ಆಕ್ಟಿವಾ ಒಂದು ಸರ್ವೋತ್ಕೃಷ್ಟ ಫ್ಯಾಮಿಲಿ ಸ್ಕೂಟರ್ ಆಗಿದ್ದು, ಅದು ನೀಡುವ ಪ್ರಾಯೋಗಿಕತೆ ಮತ್ತು ಮಿತವ್ಯಯದಿಂದಾಗಿ ಜನಪ್ರಿಯವಾಗಿದೆ.
ತಾಯಿ ಅನಾರೋಗ್ಯದ ಕಥೆ ಹೇಳಿ ಕಾರು ಪಡೆದು ಮಹಿಳೆ ಪರಾರಿ
ವಿದ್ಯಾರ್ಥಿಗಳಿಂದ ಹಿಡಿದು, ವೃದ್ಧರು, ಮಹಿಳೆಯರು, ಮಧ್ಯಮ ವರ್ಗದ ಜನರ ಅಚ್ಚುಮೆಚ್ಚಿನ ಸ್ಕೂಟರ್ ಅಂದ್ರೆ ಹೋಂಡಾ ಆಕ್ಟಿವಾ. ಹೋಂಡಾ ಆಕ್ಟಿವಾ ಸೆಕೆಂಡ್ ಹ್ಯಾಂಡ್ ಮಾರಾಟವೂ ಅತ್ಯುತ್ತಮವಾಗಿದೆ. ನೀವು ಸೆಕೆಂಡ್ ಹ್ಯಾಂಡ್ ಹೊಂಡಾ ಆಕ್ಟಿವಾ ಸ್ಕೂಟರ್ ಖರೀದಿಸಲು ಯೋಜಿಸುತ್ತಿದ್ದರೆ ಅದ್ರ ಸಾಧಕ-ಬಾಧಕಗಳನ್ನು ತಿಳಿದುಕೊಳ್ಳಿ.
ಇದು ಫ್ಯಾಮಿಲಿಗೆ ಅತ್ಯುತ್ತಮ ಸ್ಕೂಟರ್. ಇದು ಮಿತವ್ಯಯಕಾರಿ. ಚಾಲಕರಿಗೆ ಹಾಗೂ ಹಿಂಬದಿ ಸವಾರರಿಗೆ ಇದ್ರಿಂದ ಸಾಕಷ್ಟು ಅನುಕೂಲಕರ ಸೌಲಭ್ಯವನ್ನು ನೀಡುತ್ತದೆ. ಖರೀದಿ ಮತ್ತು ನಿರ್ವಹಣೆ ದುಬಾರಿಯಲ್ಲ. ಉತ್ತಮ ವಿಶ್ವಾಸಾರ್ಹತೆ ಗಳಿಸಿರುವ ಕಾರಣ ಇದನ್ನು ಖರೀದಿಸಬಹುದು. Honda Activa-i, Activa 125 ಮತ್ತು Activa 110 ಯನ್ನು ಆರಾಮವಾಗಿ ಖರೀದಿಸಬಹುದು.
BIG NEWS: ‘ಸೂಟ್ ಕೇಸ್’ ಆರೋಪಕ್ಕೆ ತಿರುಗಿಬಿದ್ದ HDK; ವಚನ ಭ್ರಷ್ಟ ಕಳಂಕದ ವಿರುದ್ಧ ಮತ್ತೆ ಗುಡುಗಿದ ಕುಮಾರಸ್ವಾಮಿ
ಹೋಂಡಾ ಆಕ್ಟಿವಾ, ವೈಶಿಷ್ಟ್ಯಗಳ ವಿಷ್ಯದಲ್ಲಿ ಹೆಚ್ಚು ಆಕರ್ಷಕವಾಗಿಲ್ಲ. ಹಳೆಯ ಮಾಡೆಲ್ ಸಿಬಿಎಸ್ ಅಥವಾ ಡಿಸ್ಕ್ ಬ್ರೇಕ್ ಆಯ್ಕೆಯಿಲ್ಲ. ಹಳೆಯ ಮಾಡೆಲ್ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಅಥವಾ ಮಿಶ್ರಲೋಹದ ಚಕ್ರಗಳಿಲ್ಲ. ಇದು ನ್ಯೂನ್ಯತೆಯಾಗಿದೆ.