ಚಿನ್ನ ಹಾಗೂ ಭಾರತಕ್ಕೆ ಅವಿನಾಭಾವ ಸಂಬಂಧವಿದೆ. ಚಿನ್ನದ ಆಭರಣಗಳನ್ನು ಖರೀದಿಸುವುದು ಭಾರತೀಯ ಕುಟುಂಬಗಳ ಹಳೆಯ ಸಂಪ್ರದಾಯ. ಕೆಲವರು ಬಳಕೆಗಾಗಿ ಬಂಗಾರ ಖರೀದಿ ಮಾಡಿದ್ರೆ ಮತ್ತೆ ಕೆಲವರು ಹೂಡಿಕೆಗಾಗಿ ಖರೀದಿ ಮಾಡುತ್ತಾರೆ. ಮತ್ತೆ ಕೆಲವರು ಸಂಪ್ರದಾಯದಂತೆ ಕೆಲ ಹಬ್ಬಗಳಲ್ಲಿ ಬಂಗಾರ ಖರೀದಿ ಮಾಡುತ್ತಾರೆ. ಮದುವೆ, ಗೃಹ ಪ್ರವೇಶ, ಹುಟ್ಟುಹಬ್ಬ ಸೇರಿದಂತೆ ಕೆಲ ವಿಶೇಷ ಸಂದರ್ಭಗಳಲ್ಲಿ ಬಂಗಾರವನ್ನು ಉಡುಗೊರೆ ರೂಪದಲ್ಲಿಯೂ ಕೊಡಲಾಗುತ್ತದೆ.
ಬಂಗಾರ ಖರೀದಿಗೆ ಮೊದಲು ಭಾರತ ಕಾನೂನನ್ನು ತಿಳಿಯಬೇಕು. ಕಪ್ಪು ಹಣ ನಿಯಂತ್ರಣಕ್ಕೆ ಮೋದಿ ಸರ್ಕಾರ ಕಾನೂನಿನಲ್ಲಿ ಬದಲಾವಣೆ ಮಾಡಿದೆ. ಆದಾಯ ತೆರಿಗೆ ನಿಯಮದಿಂದಾಗಿ ಮನೆಯಲ್ಲಿ ಹಚ್ಚಿನ ಬಂಗಾರವನ್ನು ಇಟ್ಟುಕೊಳ್ಳುವಂತಿಲ್ಲ.
ತೆರಿಗೆ ಕಾಯ್ದೆ, 1961 ರ ಸೆಕ್ಷನ್ 132 ರ ಪ್ರಕಾರ ಬಂಗಾರ ಖರೀದಿಗೆ ದಾಖಲೆಗಳು ಬೇಕು. ಒಂದು ವೇಳೆ ದಾಖಲೆಗಳನ್ನು ಕೊಡಲು ನೀವು ವಿಫಲರಾದ್ರೆ ದಾಳಿ ವೇಳೆ ಸಿಕ್ಕ ಬಂಗಾರ, ಬೆಳ್ಳಿ ಸೇರಿದಂತೆ ಅಮೂಲ್ಯ ವಸ್ತುಗಳನ್ನು ತೆರಿಗೆ ಅಧಿಕಾರಿಗಳು ತಮ್ಮ ವಶಕ್ಕೆ ಪಡೆಯುತ್ತಾರೆ. ನ್ಯಾಯ ಸಮ್ಮತವಾಗಿ ಬಂಗಾರ ಖರೀದಿಗೆ ಯಾವುದೇ ಮಿತಿಯಿಲ್ಲ. ಖರೀದಿ ಬಗ್ಗೆ ಇನ್ವಾಯ್ಸ್ ನೀಡಬೇಕಾಗುತ್ತದೆ. ವಂಶಸ್ಥರಿಂದ ಬಂದಿದ್ದರೆ ವಿಲ್ ಪ್ರತಿ ನೀಡಬೇಕಾಗುತ್ತದೆ. ಉಡುಗೊರೆಯಾಗಿ ಪಡೆದಿದ್ದರೆ ಉಡುಗೊರೆ ಪತ್ರ ನೀಡಬೇಕು.
ಸೂಕ್ತ ದಾಖಲೆಗಳಿದ್ದರೆ ನೀವು ಮಿತಿಯಿಲ್ಲದೆ ಬಂಗಾರದ ಆಭರಣಗಳನ್ನು ಖರೀದಿಸಬಹುದು. ಮನೆಯಲ್ಲಿ ಅಥವಾ ಬ್ಯಾಂಕ್ ಲಾಕರ್ ನಲ್ಲಿರುವ ಆಭರಣಗಳಿಗೆ ದಾಖಲೆ ಕೇಳುವ ಹಕ್ಕು ತೆರಿಗೆ ಇಲಾಖೆಗಿದೆ. ಕೆಲ ಮಿತಿಯವರೆಗೆ ಮನೆಯಲ್ಲಿ ಆಭರಣಗಳನ್ನು ಇಡಬಹುದು.