ನೋಯ್ಡಾ: ಕ್ರಿಸ್ಮಸ್ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಮನೆಯಲ್ಲಿ ಸಂಭ್ರಮಾಚರಣೆ ವೇಳೆ ಮದ್ಯ ಬಳಸಿದಲ್ಲಿ ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಗೌತಮಬುದ್ಧ ನಗರದ ಜಿಲ್ಲಾ ಅಬಕಾರಿ ಅಧಿಕಾರಿ ಸುಬೋಧ್ ಕುಮಾರ್ ಶ್ರೀವಾಸ್ತವ್ ಈ ಬಗ್ಗೆ ಮಾಹಿತಿ ನೀಡಿದ್ದು, ಮನೆಯಲ್ಲಿ ಪಾರ್ಟಿಗೂ ಪರವಾನಿಗೆ ಅಗತ್ಯವಾಗಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮದ್ಯ ಬಳಸುವುದಾದರೆ ಇಲಾಖೆ ಅಧಿಕಾರಿಯ ಅನುಮತಿ ಪಡೆಯಬೇಕು. ನಿಯಮ ಉಲ್ಲಂಘಿಸಿದರೆ ದಂಡ ಸಹಿತ ಕ್ರಮ ಎದುರಿಸಬೇಕಾಗುತ್ತದೆ. ಮನೆಗಳಲ್ಲಿ ಅಥವಾ ಸಾಮೂದಾಯಿಕ ಮಟ್ಟದಲ್ಲಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ತಿಳಿಸಿದ್ದಾರೆ.
ನೋಯ್ಡಾ ಅಥವಾ ಗ್ರೇಟರ್ ನೋಯ್ಡಾದಲ್ಲಿ ಮನೆಯಲ್ಲಿ, ಸಮುದಾಯ ಭವನದಲ್ಲಿ ಪಾರ್ಟಿ ಮಾಡಲು ಮದ್ಯ ನೀಡಲು ಯೋಜಿಸಿದರೆ ಕಾನೂನು ಕ್ರಮ ತಪ್ಪಿಸಲು ಪರವಾನಗಿಗಾಗಿ ಅರ್ಜಿ ಸಲ್ಲಿಸಿ ಎಂದು ತಿಳಿಸಿದ್ದಾರೆ.
ಮನೆಯಲ್ಲಿಯೂ ಸಹ ಪಾರ್ಟಿಗಳಿಗೆ ಮದ್ಯದ ಪರವಾನಗಿಯನ್ನು ಹೊಂದಿರದಿರುವುದು ನಿಯಮಗಳ ಉಲ್ಲಂಘನೆಯಾಗಿದೆ. ದಂಡ ಮತ್ತು ಬಂಧನ ಸೇರಿದಂತೆ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.