ಲ್ಯಾಂಡಿಂಗ್ ಆಗುತ್ತಿದ್ದ ವಿಮಾನಕ್ಕೆ ಹಕ್ಕಿಗಳ ಗುಂಪು ಬಡಿದಿದ್ದರಿಂದ ಇಂಜಿನ್ ನಿಂದ ಕಿಡಿ ಹತ್ತಿಕೊಂಡಿರುವ ಆಘಾತಕಾರಿ ಘಟನೆ ಸಂಭವಿಸಿತು. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.
ವಿಮಾನದ ವಿಂಡ್‌ಸ್ಕ್ರೀನ್ ಗೆ ಹಕ್ಕಿಗಳು ಬಡಿದಿದ್ದು, ಅದರ ದೇಹ ಪೂರ್ತಿ ಛಿದ್ರ-ಛಿದ್ರವಾಗಿ ವಿಂಡ್‌ಸ್ಕ್ರೀನ್ ಸಂಪೂರ್ಣ ಮುಚ್ಚಲ್ಪಟ್ಟಿದ್ದರೂ ಸಹ, ಬೋಯಿಂಗ್ 737-800 ಅನ್ನು ಇಬ್ಬರು ಪೈಲಟ್ ಗಳು ಇಟಲಿಯಲ್ಲಿ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಲ್ಟಾ ಏರ್ ಬೋಯಿಂಗ್ 737-800 ವಿಮಾನವು ನವೆಂಬರ್ 24 ರಂದು ಲಂಡನ್ ಮತ್ತು ಬೊಲೊಗ್ನಾ ನಡುವೆ ಹಾರಾಟ ನಡೆಸುತ್ತಿದ್ದಾಗ, ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಹಕ್ಕಿಗಳ ಬೃಹತ್ ಹಿಂಡು ಡಿಕ್ಕಿ ಹೊಡೆದಿವೆ.
ವಿಮಾನದ ಇಂಜಿನ್ ಮತ್ತು ರೆಕ್ಕೆಗಳಿಗೆ ಕೂಡ ಹಕ್ಕಿಗಳು ಬಡಿದಿವೆ. ಇದರಿಂದ ಬೊಲೊಗ್ನಾ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುತ್ತಿದ್ದಂತೆ ಇಂಜಿನ್ ನಿಂದ ಕಿಡಿಗಳು ಹಾರಿವೆ. ಈ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಭಾರಿ ವೈರಲ್ ಆಗಿದೆ.
ಹಕ್ಕಿಗಳ ಹೊಡೆತದಿಂದಾಗಿ ವಿಮಾನದ ಎಂಜಿನ್‌ಗೆ ಸ್ವಲ್ಪ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಪೈಲಟ್ ಗಳು ಸಾಕಷ್ಟು ಪರಿಣಿತರಾಗಿರುವುದರಿಂದ ವಿಮಾನವನ್ನು ಬಹಳ ಜಾಗರೂಕತೆಯಿಂದ ಲ್ಯಾಂಡಿಂಗ್ ಮಾಡಿದ್ದಾರೆ.
https://twitter.com/flyezequiel/status/1464398952783036422?ref_src=twsrc%5Etfw%7Ctwcamp%5Etweetembed%7Ctwterm%5E1464398952783036422%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fplane-hits-huge-flock-of-birds-before-landing-sparks-fly-out-of-engine-before-touchdown%2F836164