ಮನೆಯಲ್ಲಿ ವಾಸ್ತು ಸರಿಯಾಗಿದ್ದರೆ ಆ ಮನೆಯಲ್ಲಿ ಸುಖ, ಸಂತೋಷ ನೆಲೆಸಿರುತ್ತದೆಯಂತೆ. ಇಲ್ಲವಾದರೆ ನಕರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿರುತ್ತದೆ. ಹಾಗಾಗಿ ಮನೆಯಲ್ಲಿ ಹನುಮಂತನ ಚಿತ್ರವನ್ನು ಹಾಕುವುದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆಯಂತೆ. ಹಾಗಾಗಿ ಮನೆಯ ವಾಸ್ತು ದೋಷ ನಿವಾರಿಸಲು ಹನುಮಂತನ ಪೋಟೊವನ್ನು ಯಾವ ದಿಕ್ಕಿನಲ್ಲಿ ಹಾಕಿದರೆ ಒಳ್ಳೆಯದು ಎಂಬುದನ್ನು ತಿಳಿಯಿರಿ.
ಹನುಮಂತನ ಪಂಚಮುಖವಿರುವ ಚಿತ್ರವನ್ನು ಮನೆಯಲ್ಲಿ ಹಾಕಿ. ಇದರಿಂದ ಯಾವುದೇ ತೊಂದರೆ ಕಾಡುವುದಿಲ್ಲವಂತೆ. ಈ ಚಿತ್ರವನ್ನು ಮನೆಯಲ್ಲಿ ಹಾಕುವುದರಿಂದ ಹನುಮಂತನ ಆಶೀರ್ವಾದ ಮನೆಯ ಸದಸ್ಯರಿಗೆ ದೊರೆಯುತ್ತದೆಯಂತೆ. ಈ ಚಿತ್ರವನ್ನು ಮನೆಯ ಮುಖ್ಯ ದ್ವಾರದಲ್ಲಿಡುವುದು ಮಂಗಳಕರವಂತೆ. ಮತ್ತು ಇದನ್ನು ನೈರುತ್ಯ ದಿಕ್ಕಿನಲ್ಲಿಡಬೇಕಂತೆ.
ಹನುಮಂತನ ಪಂಚಮುಖಿ ಚಿತ್ರದಲ್ಲಿ ಕೋತಿಯ ಮುಖ ಪೂರ್ವ ದಿಕ್ಕಿನಲ್ಲಿರಬೇಕು. ಇದು ಶತ್ರುಗಳ ಮೇಲೆ ವಿಜಯವನ್ನು ನೀಡುತ್ತದೆಯಂತೆ. ಹಾಗೇ ಗರುಡನ ಮುಖ ಪಶ್ಚಿಮ ದಿಕ್ಕಿನಲ್ಲಿಡಬೇಕು. ಇದರಿಂದ ಜೀವನದಲ್ಲಿ ಎದುರಾದ ಅಡೆತಡೆಗಳು ನಿವಾರಣೆಯಾಗುತ್ತದೆಯಂತೆ.
ಹಾಗೇ ವರಾಹಮುಖವು ಉತ್ತರದಲ್ಲಿಡಬೇಕು. ಇದು ಶಕ್ತಿಯನ್ನು ನೀಡುತ್ತದೆಯಂತೆ. ಅಲ್ಲದೇ ಸಿಂಹದ ಮುಖ ದಕ್ಷಿಣ ದಿಕ್ಕಿನಲ್ಲಿರಬೇಕು. ಇದು ಭಯವನ್ನು ಹೋಗಲಾಡಿಸುತ್ತದೆಯಂತೆ. ಹಾಗೇ ಕುದುರೆ ಮುಖವು ಆಕಾಶದ ಕಡೆಗೆ ಇದ್ದು, ಇದು ನಿಮ್ಮ ಆಸೆಗಳನ್ನು ಈಡೇರಿಸುತ್ತದೆಯಂತೆ.