ಮನೆಯಲ್ಲಿ ಸದಾ ಅಶಾಂತಿ ನೆಲೆಸಿರುತ್ತದೆ. ಒಂದಲ್ಲ ಒಂದು ಸಮಸ್ಯೆ ಕಾಡುತ್ತದೆ ಎಂದ್ರೆ ಅದಕ್ಕೆ ವಾಸ್ತು ದೋಷ ಕಾರಣ. ಇದಕ್ಕೆ ಆತಂಕಪಡಬೇಕಾಗಿಲ್ಲ. ಕೆಲವೊಂದು ಸುಲಭ ಮಾರ್ಗಗಳನ್ನು ಅನುಸರಿಸಿ ವಾಸ್ತು ದೋಷವನ್ನು ಕಡಿಮೆ ಮಾಡಿಕೊಳ್ಳಬಹುದು.
ಮನೆಯ ಬಾಗಿಲು ವಾಸ್ತು ದೋಷಕ್ಕೆ ವಿರುದ್ಧವಾಗಿದ್ದರೆ ಮನೆಯ ಮುಖ್ಯ ಬಾಗಿಲಿಗೆ ಮೂರು ನವಿಲು ಗರಿಯನ್ನಿಡಿ. ಮಂತ್ರಿಸಿದ ನವಿಲು ಗರಿಯನ್ನು ಗಣಪತಿ ಮೂರ್ತಿ ಕೆಳಗೆ ಪ್ರತಿಷ್ಠಾಪನೆ ಮಾಡಿ.
ಪೂಜೆ ಮಾಡುವ ಸ್ಥಳ ವಾಸ್ತುವಿಗೆ ವಿರುದ್ಧವಾಗಿದ್ದರೆ ಪೂಜೆ ಮಾಡುವ ಸ್ಥಳದಲ್ಲಿ ಸಾಧ್ಯವಾದಷ್ಟು ನವಿಲುಗರಿಯನ್ನು ಇಡಿ. ಎಲ್ಲ ನವಿಲುಗರಿಗೆ ಕುಂಕುಮವನ್ನು ಹಚ್ಚಿ. ಇಲ್ಲ ಶಿವಲಿಂಗವನ್ನು ಸ್ಥಾಪನೆ ಮಾಡಿ. ಇದ್ರಿಂದ ವಾಸ್ತುದೋಷ ಕಡಿಮೆಯಾಗುತ್ತದೆ.
ಅಡುಗೆ ಮನೆಯಲ್ಲಿ ವಾಸ್ತು ದೋಷವಿದ್ದರೂ ನವಿಲು ಗರಿ ಪರಿಹಾರ ನೀಡುತ್ತದೆ. ಅಡುಗೆ ಮನೆಯಲ್ಲಿ ನವಿಲುಗರಿಯನ್ನು ಸ್ಥಾಪನೆ ಮಾಡಿ. ಅಡುಗೆ ಮಾಡುವ ಒಲೆ ಬಳಿ ಇದನ್ನು ಇಡಬೇಡಿ. ಎರಡೂ ನವಿಲುಗರಿ ಕಟ್ಟಿಡಿ. ಗಂಗೆಯ ನೀರನ್ನು ಚಿಮುಕಿಸಿ.