
ಪ್ರತಿಯೊಬ್ಬರಿಗೂ ಕನಸು ಬೀಳುವುದು ಸಾಮಾನ್ಯ. ಬೇರೆ ಬೇರೆ ಸ್ವಪ್ನಗಳು ಬೀಳುತ್ತವೆ. ಸ್ವಪ್ನ ಶಾಸ್ತ್ರದಲ್ಲಿ ಕನಸಿನ ಬಗ್ಗೆ ಹೇಳಲಾಗಿದೆ. ಕನಸುಗಳು ಮುಂದಿನ ಘಟನೆಗಳಿಗೆ ಸೂಚನೆ ನೀಡಿರುತ್ತವೆ. ಕನಸಿನಲ್ಲಿ ಪೂರ್ವಜರು ಕಾಣಿಸಿಕೊಳ್ಳುತ್ತಾರೆ. ಪೂರ್ವಜರು ಕನಸಿನಲ್ಲಿ ಬಂದ್ರೆ ಅದು ಯಾವುದರ ಸಂಕೇತ ಗೊತ್ತಾ?.
ಸಾಮಾನ್ಯವಾಗಿ ಪಿತೃ ಪಕ್ಷದಲ್ಲಿ,ಪೂರ್ವಜರು ಕನಸಿನಲ್ಲಿ ಬಂದ್ರೆ ಅದನ್ನು ಶುಭ ಎನ್ನಲಾಗುತ್ತದೆ. ಪಿತೃ ಪಕ್ಷದಲ್ಲಿ ಮಾಡಿದ ದಾನ, ಧರ್ಮದಿಂದ ಸಂತೃಪ್ತರಾಗುವ ಪೂರ್ವಜರು, ಕನಸಿನಲ್ಲಿ ಬಂದು ಆಶೀರ್ವಾದ ಮಾಡ್ತಾರೆಂದು ನಂಬಲಾಗಿದೆ.
ಕೆಲವರ ಕನಸಿನಲ್ಲಿ ಬರುವ ಪೂರ್ವಜರು, ಕೆಲ ವಸ್ತುಗಳಿಗೆ ಬೇಡಿಕೆಯಿಡ್ತಾರೆ. ಅವರು ಕೇಳಿದ ವಸ್ತುಗಳನ್ನು, ಶ್ರದ್ಧೆಯಿಂದ ದಾನ ಮಾಡಿದ್ರೆ ಯಶಸ್ಸು ಲಭಿಸುತ್ತದೆ ಎನ್ನಲಾಗಿದೆ.
ಗರುಡ ಪುರಾಣದ ಪ್ರಕಾರ, ಯಾವುದೇ ಸತ್ತ ವ್ಯಕ್ತಿ ಕನಸಿನಲ್ಲಿ ಬಂದ್ರೆ ಆತನ ಆತ್ಮಕ್ಕೆ ಇನ್ನೂ ಶಾಂತಿ ಸಿಕ್ಕಿಲ್ಲವೆಂದು ಅರ್ಥ. ಆತ್ಮಕ್ಕೆ ಶಾಂತಿ ಸಿಗಬೇಕೆಂದ್ರೆ ಮನೆಯಲ್ಲಿ ರಾಮಾಯಣ ಗೀತೆಯನ್ನು ಪಠಿಸಬೇಕು. ಇದ್ರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲಿದೆ.
ಪೂರ್ವಜರು ಮನೆ ಮುಂದೆ ನಿಂತಂತೆ ಕಾಣುತ್ತಿದ್ದರೆ, ಆಕಳಿಗೆ ಪ್ರತಿ ದಿನ ಆಹಾರ ನೀಡಬೇಕು. ಇದರಿಂದ ಪೂರ್ವಜರ ಆಶೀರ್ವಾದ ಸದಾ ಸಿಗುತ್ತದೆ ಎಂದು ನಂಬಲಾಗಿದೆ.