ಚಿತ್ರದುರ್ಗ: ಚಿತ್ರದುರ್ಗದ ವದ್ದಿಕೆರೆ ಗ್ರಾಮದ ಬಳಿ ಪೈಲಟ್ ರಹಿತ ವಿಮಾನ ಪತನಗೊಂಡಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಬಳಿ ಡಿ.ಆರ್.ಡಿ.ಒ ಸಿದ್ಧಪಡಿಸಿದ್ದ ಪೈಲಟ್ ರಹಿತ ವಿಮಾನ ‘ತಪಸ್’ ನಿಯಂತ್ರಣ ತಪ್ಪಿ ಪತನಗೊಂಡಿದೆ.
ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ಇರುವ ಡಿ.ಆರ್.ಡಿ.ಒ ಈ ವಿಮಾನವನ್ನು ಸಿದ್ಧಪಡಿಸಿತ್ತು. ಇಂದು ಪರೀಕ್ಷಾರ್ಥವಾಗಿ ಹಾರಾಟ ನಡೆಸಿದ್ದ ಡ್ರೋಣ್ ಮಾದರಿಯ ತಪಸ್ ವಿಮಾನ ನಿಯಂತ್ರಣ ತಪ್ಪಿ ಜಮೀನಿನಲ್ಲಿ ಬಿದ್ದಿದೆ ಎಂದು ತಿಳಿದುಬಂದಿದೆ.