ಐಸ್ಲೆಂಡ್ನಿಂದ ಇಂಗ್ಲೆಂಡ್ನ ಮ್ಯಾಂಚೆಸ್ಟರ್ಗೆ ಈಸಿಜೆಟ್ ವಿಮಾನದಲ್ಲಿ ಪ್ರಯಾಣ ಮಾಡಿದ ಯಾತ್ರಿಕರಿಗೆ ಅದ್ಭುತ ಅನುಭವ ಉಂಟಾಯಿತು. ಏಕೆಂದರೆ ವಿಮಾನದ ಪೈಲಟ್ ವಿಮಾನದ ಮಧ್ಯದಲ್ಲಿ ಅವರನ್ನು ಅನಿರೀಕ್ಷಿತ ಮಾರ್ಗದಲ್ಲಿ ಕರೆದೊಯ್ದು ಕುತೂಹಲದ ದೃಶ್ಯವನ್ನು ತೋರಿಸಿದ್ದಾರೆ.
ಪ್ರಯಾಣಿಕರಿಗೆ ನಾರ್ದರ್ನ್ ಲೈಟ್‌ಗಳ ನೋಟವನ್ನು ನೀಡಲು ಪೈಲಟ್ ವಿಮಾನವನ್ನು 360 ಡಿಗ್ರಿ ತಿರುಗಿಸಿ ದೃಶ್ಯವನ್ನು ಸವಿಯುವಂತೆ ಮಾಡಿದ್ದಾರೆ.
ಔರೆಲಿಯಾ ಬೊರಿಯಾಲಿಸ್ ಪ್ರಕೃತಿಯ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದೆನಿಸಿದೆ. ಇದರ ಸೌಂದರ್ಯವನ್ನು ಪ್ರಯಾಣಿಕರಿಗೆ ತೋರಿಸುವ ಸಲುವಾಗಿ ಪೈಲಟ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ನಂಬಲಾಗದ ವಿದ್ಯಮಾನವನ್ನು ವೀಕ್ಷಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಪ್ರಯಾಣಿಕರನ್ನು ಈ ಸೌಂದರ್ಯವನ್ನು ನೋಡಿ ರೋಮಾಂಚನಗೊಂಡಿದ್ದಾರೆ. ಪೈಲಟ್ಗೆ ಧನ್ಯವಾದ ಸಲ್ಲಿಸಿದ್ದಾರೆ. ಇಂಥದ್ದೊಂದು ಸೌಂದರ್ಯವನ್ನು ಜೀವಮಾನದಲ್ಲಿ ಒಮ್ಮೆ ನೋಡಬಹುದು. ಇಂದು ನಮ್ಮ ಜೀವನ ಸಾರ್ಥಕವಾಯಿತು ಎಂದು ಜನರು ಹೇಳಿದ್ದಾರೆ. ಟ್ವಿಟ್ಟರ್ ಬಳಕೆದಾರರೊಬ್ಬರು ಇದರ ಫೋಟೋ ಶೇರ್ ಮಾಡಿಕೊಂಡಿದ್ದಾರೆ.