ಬಸ್, ರೈಲು ಹೀಗೆ ಯಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ವೇಳೆ ಪ್ರಯಾಣಿಕರಿಗೆ ತಮ್ಮ ಸೀಟ್ ಸರಿ ಬರುವುದಿಲ್ಲ. ವಿಮಾನದಲ್ಲೂ ಪ್ರಯಾಣಿಕರು ಸೀಟ್ ಬದಲಿಸುತ್ತಾರೆ. ಆದ್ರೆ ವಿಮಾನದಲ್ಲಿ ಸೀಟ್ ಬದಲಾವಣೆ ಮಾಡುವುದು ಅಪಾಯಕ್ಕೆ ಆಹ್ವಾನ ನೀಡಬಹುದು ಎಂದು ಪೈಲಟ್ ಬಹಿರಂಗಪಡಿಸಿದ್ದಾರೆ.
ದಿ ಸನ್ ನ ವರದಿಯ ಪ್ರಕಾರ, ಪ್ರಯಾಣಿಕರು, ಸೀಟ್ ಬದಲಾಯಿಸುವುದರಿಂದ ವಿಮಾನ ತುರ್ತು ಭೂಸ್ಪರ್ಶಕ್ಕೆ ಕಾರಣವಾಗಬಹುದು ಎಂದು ಪೈಲಟ್ ಮ್ಯಾಗ್ನಾರ್ ನಾರ್ಡಾಲ್ ಹೇಳಿದ್ದಾರೆ. ಟೇಕ್-ಆಫ್ ಸಮಯದಲ್ಲಿ ಸೀಟ್ ಬದಲಿಸುವುದ್ರಿಂದ, ವಿಮಾನದಲ್ಲಿ ತೂಕದ ಸಮತೋಲನ ತಪ್ಪುತ್ತದೆ. ಇದ್ರಿಂದ ತಾಂತ್ರಿಕ ಸಮಸ್ಯೆಯುಂಟಾಗುತ್ತದೆ ಎಂದವರು ಹೇಳಿದ್ದಾರೆ.
ಪೈಲಟ್ ಮ್ಯಾಗ್ನಾರ್ ನಾರ್ಡಾಲ್ ಹಿರಿಯ ಪೈಲಟ್ ಒಬ್ಬರು ಇಂಥ ಸಮಸ್ಯೆ ಎದುರಿಸಿದ್ದರೆಂದು ಹೇಳಿದ್ದಾರೆ. ವಿಮಾನದಲ್ಲಿ ಪ್ರಯಾಣಿಕರು ತಮ್ಮ ಸೀಟ್ ಬದಲಿಸಬಹುದೇ ಎಂಬ ಪ್ರಶ್ನೆಗೆ ಅವರು ಬದಲಿಸಬಹುದು ಎಂದಿದ್ದಾರೆ. ಆದ್ರೆ ಬದಲಿಸುವ ಮೊದಲು, ವಿಮಾನ ಸಿಬ್ಬಂದಿ ಕೇಳಬೇಕು. ಅವರಿಗೆ ಸಮತೋಲನದ ಬಗ್ಗೆ ಮಾಹಿತಿ ಇರುತ್ತದೆ. ಅವರು ಸೂಕ್ತ ಸೀಟ್ ನೀಡುತ್ತಾರೆ. ಜೊತೆಗೆ ಯಾವಾಗ ಸೀಟ್ ಬದಲಿಸಬೇಕೆಂಬ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ. ಹಾಗೆ ಎಲ್ಲ ಸೀಟ್ ಗಳನ್ನು ಬದಲಿಸಲು ಸಾಧ್ಯವಿಲ್ಲ. ಕೆಲ ಸೀಟ್ ಬದಲಾವಣೆ ವೇಳೆ ಹೆಚ್ಚುವರಿ ಹಣ ನೀಡಬೇಕೆಂದು ಅವರು ಹೇಳಿದ್ದಾರೆ.