ಜನಪ್ರಿಯ ಪಾನೀಯ ರೆಡ್ ಬುಲ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಇಟಲಿಯ ಪೈಲಟ್ ಡಾರಿಯೋ ಕೋಸ್ಟಾ ಅವರು ಟರ್ಕಿ ದೇಶದ ಎರಡು ಸುರಂಗ ಮಾರ್ಗದ ಮದ್ಯೆ ಲೀಲಾಜಾಲವಾಗಿ ವಿಮಾನ ಓಡಿಸಿರುವ ವಿಡಿಯೋ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೆಪ್ಟೆಂಬರ್ ನಾಲ್ಕರಂದು ಮುಂಜಾನೆ ವೇಳೆಯಲ್ಲಿ, ಕ್ಯಾಟ್ಲಕ ಸುರಂಗ ಮಾರ್ಗದಲ್ಲಿ, ಒಂದು ಘಂಟೆಗೆ 250 ಕಿಲೋಮೀಟರ್ ವೇಗದಲ್ಲಿ ಚಲಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಈ ರೀತಿ ಎರಡು ಸುರಂಗ ಮಾರ್ಗದಲ್ಲಿ ವಿಮಾನ ಓಡಿಸಿದವರಲ್ಲಿ ಕೋಸ್ಟಾ ಮೊದಲಿಗರಾಗಿದ್ದಾರೆ.
ʼಸಾಲʼ ಪಡೆಯುವ ಮುನ್ನ ನಿಮಗೆ ತಿಳಿದಿರಲಿ ಈ ಎಲ್ಲ ಮಾಹಿತಿ
ರೆಡ್ ಬುಲ್ ಅವರ ಬ್ಲಾಗಿನೊಂದಿಗೆ ಮಾತನಾಡಿದ ಕೋಸ್ಟಾ ಅವರು, ʼಎಲ್ಲವು ಮಿಂಚಿನಂತೆ ನಡೆದು ಹೋಯಿತು. ಮೊದಲ ಸುರಂಗ ಮಾರ್ಗದಿಂದ ಹೊರಬರುತ್ತಿದ್ದಂತೆ , ಗಾಳಿ ಬರುತ್ತಿದ್ದ ಕಾರಣ ವಿಮಾನ ಬಲಕ್ಕೆ ತಿರುಗುತ್ತಿತ್ತು. ಆ ಕ್ಷಣಕ್ಕೆ ವಿಮಾನ ಓಡಿಸುವಲ್ಲಿ ಮಾತ್ರ ನಿಗಾ ಕೊಟ್ಟು, ಮತ್ತೊಂದು ಸುರಂಗ ಮಾರ್ಗದೊಳಗೆ ನುಸುಳಿದೆʼ ಎಂದಿದ್ದಾರೆ. ಅತ್ಯಂತ ಉದ್ದವಾದ ಸುರಂಗ ಮಾರ್ಗದಲ್ಲಿ ವಿಮಾನ ಓಡಿಸಿದ್ದು, ಇದು ಗಿನ್ನಿಸ್ ದಾಖಲೆಯಾಗಿದೆ. ಈ ವಿಡಿಯೋ ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಮಿಶ್ರ ಪ್ರತ್ರಿಕ್ರಿಯೆ ವ್ಯಕ್ತವಾಗಿದೆ.