
ಮೆತ್ತನೆಯ ದಿಂಬುಗಳನ್ನು ಹಿಡಿದುಕೊಂಡು ಒಬ್ಬರು ಮತ್ತೊಬ್ಬರ ತಲೆಗೆ ಬಡಿಯುವ ಆಟವನ್ನು ಬಹುಶಃ ಎಲ್ಲರೂ ಮಕ್ಕಳಿದ್ದಾಗ ಆಡಿರುತ್ತಾರೆ. ಈಗಲೂ ಹಲವು ದೊಡ್ಡವರು ತಮ್ಮ ಹೆಂಡತಿ/ಗಂಡನ ಜತೆಗೆ ದಿಂಬಿನಿಂದ ಬಡಿದಾಡುತ್ತಿರಬಹುದು. ಮಕ್ಕಳಿದ್ದ ಮನೆಯ ಮಲಗುವ ಕೋಣೆಯಲ್ಲಿ ಈ ದೃಶ್ಯ ಸರ್ವೇ ಸಾಮಾನ್ಯ.
ಆದರೆ ಇಂಥದ್ದೊಂದು ದಿಂಬುಗಳ ಬಡಿದಾಟವು ರಾಷ್ಟ್ರಮಟ್ಟದ ಪಂದ್ಯವಾಗಿದೆ ಎಂದರೆ ನಂಬುತ್ತೀರಾ…!? ಹೌದು, ಇದು ಜಪಾನ್‌ನಲ್ಲಿ ‘ಆಲ್ ಜಪಾನ್ ಪಿಲ್ಲೋ ಫೈಟಿಂಗ್ ಚಾಂಪಿಯನ್‌ಶಿಪ್ ‘ ಹೆಸರಲ್ಲಿ ಜನಪ್ರಿಯ ಕ್ರೀಡೆ ಆಗಿದೆ. ವಿದ್ಯಾರ್ಥಿಗಳು ಹೆಚ್ಚಾಗಿ ಇಂಥ ಕ್ರೀಡೆ ಆಯೋಜನೆ ಮಾಡಿ, ಪ್ರಶಸ್ತಿಗಳನ್ನು ಕೂಡ ಬಾಚುತ್ತಾರೆ.
ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಎಲ್‌ಐಸಿ HFL ನಿಂದ ಭರ್ಜರಿ ಗುಡ್ ನ್ಯೂಸ್
2013ರಲ್ಲಿ ದಿಂಬಿನ ಬಡಿದಾಟದ ಪಂದ್ಯಾವಳಿಗಳು ಜಪಾನ್‌ನಲ್ಲಿ ಆರಂಭಗೊಂಡವು. 9 ವರ್ಷದ ಬಾಲಕರಿಂದ ಆರಂಭಗೊಂಡು 60 ವರ್ಷದ ವೃದ್ಧರವರೆಗೆ ವಿವಿಧ ವರ್ಗಗಳಲ್ಲಿ ಈ ಪಂದ್ಯ ನಡೆಸಲಾಗುತ್ತಿದೆ. ಈ ಪಂದ್ಯಕ್ಕಾಗಿ ಸಾಂಪ್ರದಾಯಿಕವಾದ ಜಪಾನಿ ಉಡುಗೆ ’ಯುಕಾತಾಸ್’ ಧರಿಸಲೇಬೇಕು. ಇದು ದೊಗಲನೆಯ ದಿರಿಸಾಗಿದ್ದು, ವಿಪರೀತ ಬೇಸಿಗೆ ಕಾಲಕ್ಕೆ ಸೂಕ್ತವಾಗ ಉಡುಗೆ.
ಪಂದ್ಯ ಆಡುವುದು ಹೀಗೆ……
ತೀರ್ಪುಗಾರರು ಸೀಟಿ ಹೊಡೆಯುವ ತನಕ ಆಟಗಾರರು ಮಲಗಿದಂತೆ ನಾಟಕ ಮಾಡುತ್ತಾರೆ.
ಸೀಟಿ ಬಂದ ಕೂಡಲೇ ಆರು ಮಂದಿ ಎದ್ದುಕೊಂಡು ಎದುರಿನ ತಂಡದಲ್ಲಿದ್ದವರನ್ನು ದಿಂಬಿನಿಂದ ಬಡಿಯಲು ಯತ್ನಿಸುತ್ತದೆ.
ಪ್ರತಿಸ್ಪರ್ಧಿಗಳು ತಮ್ಮ ತಂಡದ ನಾಯಕನಿಗೆ ದಿಂಬಿನ ಹೊಡೆತ ಬೀಳದಂತೆ ತಡೆಯಬೇಕು.
ಅಂಥ ರಕ್ಷಣೆಗೆ ಯಾವುದೇ ತರಹದ ಗಮನ ಸೆಳೆಯುವಿಕೆ ನಾಟಕಗಳನ್ನು ಕೂಡ ಮಾಡಬಹುದು.
ಒಂದು ವೇಳೆ ನಾಯಕನಿಗೆ ಎದುರು ತಂಡದ ದಿಂಬಿನಿಂದ ಹೊಡೆತ ಬಿದ್ದರೆ, ಆ ತಂಡ ಸೋಲು ಕಂಡಂತೆ.