alex Certify ಯಾತ್ರಾರ್ಥಿಗಳೇ ಗಮನಿಸಿ : ಜ. 18 ರಿಂದ ‘ಭಾರತ್ ಗೌರವ್’ ದಕ್ಷಿಣ ಯಾತ್ರೆ ಆರಂಭ, ಹೀಗೆ ನೋಂದಾಯಿಸಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾತ್ರಾರ್ಥಿಗಳೇ ಗಮನಿಸಿ : ಜ. 18 ರಿಂದ ‘ಭಾರತ್ ಗೌರವ್’ ದಕ್ಷಿಣ ಯಾತ್ರೆ ಆರಂಭ, ಹೀಗೆ ನೋಂದಾಯಿಸಿಕೊಳ್ಳಿ

ಬೆಂಗಳೂರು : ಧಾರ್ಮಿಕ ದತ್ತಿ ಇಲಾಖೆಯ ‘ಕರ್ನಾಟಕ ಭಾರತ್ ಗೌರವ್ ಯಾತ್ರೆ’ಯು ಜನವರಿ 18ರಿಂದ ಆರಂಭವಾಗಲಿದೆ. 6 ದಿನಗಳ ಯಾತ್ರೆಯಲ್ಲಿ ರಾಮೇಶ್ವರ, ಮದುರೈ, ಕನ್ಯಾಕುಮಾರಿ, ತಿರುವನಂತಪುರ ಕ್ಷೇತ್ರಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಯಾತ್ರಿಗೆ ಒಟ್ಟು 15 ಸಾವಿರ ರೂ. ಖರ್ಚಗಲಿದ್ದು, ರಾಜ್ಯ ಸರ್ಕಾರವು 5 ಸಾವಿರ ರೂ. ಸಹಾಯಧನ ನೀಡಲಿದೆ. ಉಳಿದ 10 ಸಾವಿರ ರೂ. ಯಾತ್ರಿಯೇ ಭರಿಸಬೇಕಿದೆ.

ಈ ಯಾತ್ರೆ ರಾಮೇಶ್ವರ-ಕನ್ಯಾಕುಮಾರಿ-ಮಧುರೈ ಮತ್ತು ತಿರುವನಂತಪುರಂ ಅನ್ನು ಒಳಗೊಂಡಿದೆ. ಐಆರ್ಸಿಟಿಸಿ/ ಐಟಿಎಂಎಸ್ ವೆಬ್ಸೈಟ್ ಮೂಲಕ 18/1/2024ರಿಂದ ಬುಕ್ಕಿಂಗ್ ಆರಂಭವಾಗಲಿದೆ . ಈ ವಿಶೇಷ ರೈಲು ಹೊರಡಲಿರುವ ದಿನಾಂಕಗಳು. ನಿರ್ಗಮನ 18/1/2024, ಆಗಮನ 23/1/2024. ನಿರ್ಗಮನ 30/1/2024, ಆಗಮನ 4/2/2024 ಆಗಿದೆ.

ರಾಮೇಶ್ವರ- ರಾಮೇಶ್ವರ ದೇವಾಲಯ. ಕನ್ಯಾಕುಮಾರಿ- ಶ್ರೀ ಭಗವತಿ ದೇವಾಲಯ. ಮಧುರೈ- ಶ್ರೀ ಮೀನಾಕ್ಷಿ ದೇವಾಲಯ. ತಿರುವನಂತಪುರಂ- ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯಗಳ ದರ್ಶನವನ್ನು ಈ ಪ್ಯಾಕೇಜ್ ನಲ್ಲಿ ನೀಡಲಾಗುತ್ತದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...