ಬೆಂಗಳೂರು: ದೇಶದ ಪ್ರಮುಖ ಪುಣ್ಯಕ್ಷೇತ್ರಗಳಿಗೆ ರಾಜ್ಯದಿಂದ ಮೊದಲ ಬಾರಿಗೆ ತೆರಳುವ ಯಾತ್ರಿಕರಿಗೆ ರಾಜ್ಯ ಸರ್ಕಾರದಿಂದ ನೀಡುತ್ತಿರುವ ಸಹಾಯಧನ ವ್ಯವಸ್ಥೆಯನ್ನು ಸರಳಗೊಳಿಸಲಾಗಿದೆ.
ಅರ್ಜಿ ಸಲ್ಲಿಕೆ ವಿಧಾನವನ್ನು ಕೂಡ ಸುಲಭಗೊಳಿಸಿ ಆದೇಶಿಸಲಾಗಿದೆ. ಈ ಮೊದಲು ಹೊರಡಿಸಿದ್ದ ಮೂರು ಪ್ರತ್ಯೇಕ ಮಾರ್ಗಸೂಚಿಗಳಲ್ಲಿನ ನ್ಯೂನ್ಯತೆಯನ್ನು ಹೋಗಲಾಡಿಸಿ ಸಬ್ಸಿಡಿ ಬಯಸುವ ಯಾತ್ರಾರ್ಥಿಗಳ ಸಮಸ್ಯೆಯನ್ನು ಕೂಡ ಬಗೆಹರಿಸಲಾಗಿದೆ. ಅರ್ಜಿ ಸಲ್ಲಿಕೆ, ಸಹಾಯಧನ ಪಾವತಿ, ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ಪಾರದರ್ಶಕ ಹಾಗೂ ಸುಲಭವಾಗಿಸಲು ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಮುಜರಾಯಿ ಇಲಾಖೆ ವೆಬ್ಸೈಟ್ ನಲ್ಲಿ ಆಸಕ್ತ ಯಾತ್ರಿಕರು ವಿವರ ಪಡೆದುಕೊಳ್ಳಬಹುದು. ಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ತಲಾ 30,000 ರೂ. ಸಹಾಯಧನ ನೀಡಲಾಗುವುದು. ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ಚಾರ್ ಧಾಮ್ ಯಾತ್ರೆಗೆ ಮೊದಲ ಬಾರಿ ಯಾತ್ರೆ ಕೈಗೊಳ್ಳುವವರಿಗೆ 20 ಸಾವಿರ ರೂಪಾಯಿ ನೀಡಲಾಗುತ್ತದೆ. ಕಾಶಿಯಾತ್ರೆ ಕೈಗೊಂಡ ಮೂವತ್ತು ಸಾವಿರ ಯಾತ್ರಾರ್ಥಿಗಳಿಗೆ ಒಂದು ಬಾರಿ ಮಾತ್ರ 5,000 ರೂ. ಸಹಾಯಧನ ನೀಡಲಾಗುವುದು.