ವಿವಿಧತೆಯಲ್ಲಿ ಏಕತೆಗೆ ಭಾರತ ವಿಶ್ವದಲ್ಲೇ ಹೆಸರುವಾಸಿ. ಈ ವಾತಾವರಣಕ್ಕೆ ಪೂರಕ ಎಂಬಂತೆ ಭಾರತೀಯ ಸೇನಾ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ಇತ್ತೀಚೆಗೆ ಕಾಶ್ಮೀರದಲ್ಲಿ ನಮಾಜ್ ಮಾಡುತ್ತಿರುವುದನ್ನು ತೋರಿಸುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ರಂಜಾನ್ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಜನರಲ್ ಡಿ.ಪಿ. ಪಾಂಡೆ, ಇತರ ಹಿರಿಯ ಅಧಿಕಾರಿಗಳು ಮತ್ತು ಅವರ ಪಡೆಯೊಂದಿಗೆ ಪ್ರಾರ್ಥನೆ ಮಾಡುವುದನ್ನು ಫೋಟೋದಲ್ಲಿ ಕಾಣಬಹುದು.
ಟ್ವಿಟರ್‌ನಲ್ಲಿ ಸಹ ಬಳಕೆದಾರರು ಈ ಕೋಮು ಸೌಹಾರ್ದತೆಯನ್ನು ಶ್ಲಾಘಿಸಿದ್ದಾರೆ. ಭಾರತೀಯ ಸೇನೆಯು ಕೋಮು ಸೌಹಾರ್ದತೆಯನ್ನು ಪ್ರದರ್ಶಿಸಿ ಸರಿಯಾದ ಉದಾಹರಣೆ ನೀಡಿದೆ ಎಂದು ಟ್ವಿಟರ್‌ನಲ್ಲಿ ಹಲವರು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.
ಧರ್ಮದ ಹೆಸರಿನಲ್ಲಿ ವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುವ ಸಂಗತಿಗಳಿಗೆ ಇದು ಸೌಹಾರ್ದತೆಯ ಸಂದೇಶ. ಇದು ನಮ್ಮ ಭಾರತ ಮತ್ತು ನಾವು ಅದರ ಬಗ್ಗೆ ಹೆಮ್ಮೆ ಪಡುತ್ತೇವೆ ಎಂಬ ಒಬ್ಬ ಬಳಕೆದಾರರ ಸಾಲು ಗಮನ ಸೆಳೆಯುತ್ತಿದೆ.
https://twitter.com/MYounisNaik/status/1518648545527562242?ref_src=twsrc%5Etfw%7Ctwcamp%5Etweetembed%7Ctwterm%5E1518648545527562242%7Ctwgr%5E%7Ctwcon%5Es1_&ref_url=https%3A%2F%2Fwww.newspointapp.com%2Fenglish-news%2Fpublisher-indiatimes%2Ftop-news%2Fthats-my-india-picture-of-indian-army-officers-offering-namaz-in-kashmir-wins-hearts%2Farticleshow%2F145048207525675f07e1cf04a0622b0e3c884fba