ಕೇಕುಗಳೆಂದರೆ ಇಷ್ಟ ಪಡದೇ ಇರುವವರಿಲ್ಲ. ಒಂದೊಳ್ಳೆ ಊಟದ ಬಳಿಕ ಅಥವಾ ಕಾಫಿಯೊಂದಿಗೆ ರುಚಿಯಾದ ಕೇಕ್ ಪೀಸ್ ಒಂದನ್ನು ತಿನ್ನುವುದು ಅದೆಂಥಾ ಖುಷಿಯ ಅನುಭವ ಅಲ್ಲವೇ?
ಚಾಕ್ಲೇಟ್, ಪೈನಾಪಲ್‌ನಿಂದ ಹಿಡಿದು ರೆಡ್ ವೆಲ್ವೆಟ್ ಮತ್ತು ಬ್ಲಾಕ್ ಫಾರೆಸ್ಟ್‌ವರೆಗೂ ಕೇಕುಗಳಲ್ಲಿ ಯಾವ ಫ್ಲೇವರ್ ಇಲ್ಲ ಹೇಳಿ ? ಆದರೆ ಟೊಮ್ಯಾಟೋ ಕೆಚಪ್‌ನಲ್ಲಿ ಕೇಕ್ ಮಾಡಲಾಗುತ್ತದೆ ಎಂದು ನಿಮಗೆ ತಿಳಿದಾಗ ಏನು ಅನಿಸುತ್ತದೆ?
ಮುದ್ದಿನ ಕೋಳಿಗೆ ಅದ್ದೂರಿ ಬರ್ತಡೇ ಆಚರಣೆ…! ಕೇಕ್ ತಿನ್ನಿಸಿ ಸಂಭ್ರಮಿಸಿದ ಕುಟುಂಬ
ಟೊಮ್ಯಾಟೋ ಕೆಚಪ್‌ನಿಂದ ತಯಾರಿಸಿದ ಕೇಕ್ ಒಂದರ ಚಿತ್ರವನ್ನು ರೆಡ್ಡಿಟ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದು, ಅದೀಗ ಆನ್ಲೈನ್‌ನಲ್ಲಿ ವೈರಲ್ ಆಗಿದೆ.
ವಿಚಿತ್ರವಾದ ವೆಲ್ವೆಟ್ ಬಣ್ಣದ ಈ ಕೇಕ್ ಫ್ರಾಸ್ಟಿಂಗ್‌ನೊಂದಿಗೆ ಇರುವ ಚಿತ್ರದೊಂದಿಗೆ, ಅರ್ಧ ಚಮಚೆ ಟೊಮ್ಯಾಟೋ ಕೆಚಪ್ ಬಳಸಿ ಕೇಕ್ ತಯಾರಿಸಿದ ಬಗೆಯನ್ನು ಪೋಸ್ಟ್‌ನಲ್ಲಿ ವಿವರಿಸಲಾಗಿದೆ.