
ಬೆಂಗಳೂರಿನ ಪ್ರಮುಖ ಸ್ಟಾರ್ಟ್‌ಅಪ್‌ನ ಯುವಕನೊಬ್ಬ ಇಂದು ರಾತ್ರಿ ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದು ಬಿದ್ದಿದ್ದಾನೆ. ಉಸಿರುಗಟ್ಟಿಸುವ ಸ್ಥಿತಿಯಲ್ಲಿ ಆತನನ್ನು ನೋಡಿ. ಅವನ ತಂಡವು ಪಾರ್ಟಿ ಮುಗಿಸಿ ಎನ್ಜಾಯ್ ಮಾಡಿ ಬಿಟ್ಟು ಹೋಗಿದೆ. ಈತ ಏಕಾಂಗಿಯಾಗಿ ಬಾರ್‌ನಲ್ಲಿ ಬಿದ್ದಿದ್ದಾನೆ. ಈ ರೀತಿ ಮಾಡಿಕೊಂಡು ಜೀವನ ಏಕೆ ಹಾಳು ಮಾಡಿಕೊಳ್ಳುತ್ತೀರಿ ಎಂದು ಅವರು ಪ್ರಶ್ನಿಸಿದ್ದಾರೆ.
ನಂತರದ ಟ್ವೀಟ್‌ನಲ್ಲಿ, ಅವರು ಸ್ಟಾರ್ಟಪ್ ಸಂಸ್ಥಾಪಕರಿಗೂ ಸಂದೇಶವನ್ನು ಕಳುಹಿಸಿದ್ದಾರೆ. ನಿಮ್ಮ ಸಿಬ್ಬಂದಿಯನ್ನು ಸರಿಯಾಗಿ ನೋಡಿಕೊಂಡರೆ ಒಳ್ಳೆಯದು ಎಂದು ಅವರು ಹೇಳಿದ್ದು, ಇದರ ಪರ-ವಿರೋಧ ನಿಲುವು ವ್ಯಕ್ತವಾಗಿದೆ.