ಹಿಮಾಚಲ ಪ್ರದೇಶದ ಧರ್ಮಶಾಲಾದ ಫತೇಫುರ್ ಗ್ರಾಮದಲ್ಲಿ ಬಲೆಯಲ್ಲಿ ಸಿಕ್ಕಿಬಿದ್ದಿದ್ದ ಚಿರತೆಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ.
ಪ್ರಾಣಿಗಳನ್ನ ಸೆರೆಹಿಡಿಯಲು ಗ್ರಾಮಸ್ಥರು ಹಾಕಿದ್ದ ಬಲೆಯಲ್ಲಿ ಚಿರತೆ ಸಿಲುಕಿತ್ತು ಎನ್ನಲಾಗಿದೆ.
ಚಿರತೆಯನ್ನ ಗೋಪಾಲ್ಪುರ ಮೃಗಾಲಯಕ್ಕೆ ಕರೆದೊಯ್ದ ಚಿಕಿತ್ಸೆ ನೀಡಿದ ಬಳಿಕ ಅದನ್ನ ಬಿಡುಗಡೆ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಮುಖ್ಯ ಸಂರಕ್ಷಣಾಧಿಕಾರಿ ಅನಿಲ್ ಠಾಕೂರ್ ತಿಳಿಸಿದ್ದಾರೆ.
ಗ್ರಾಮ ಹಾಗೂ ಅರಣ್ಯ ಪ್ರದೇಶಗಳಲ್ಲಿ ವರ್ಷಕ್ಕೆ ಇಂತಹ 10 ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರ್ತಿವೆ ಅಂತಾ ಅಧಿಕಾರಿಗಳು ಹೇಳಿದ್ದಾರೆ. ಚಿರತೆ ಹಗ್ಗದಿಂದ ಕಟ್ಟಲಾಗಿದ್ದ ಉರುಳಿಗೆ ಸಿಕ್ಕಿ ಹಾಕಿಕೊಂಡಿದೆ. ಕೂಡಲೇ ನಾವು ಅದನ್ನ ರಕ್ಷಣೆ ಮಾಡಿದ್ದೇವೆ. ಕಾಡು ಪ್ರಾಣಿಗಳನ್ನ ಸೆರೆಹಿಡಿಯುವಂತಹ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಜನರಿಗೆ ಮಾರ್ಗದರ್ಶನ ನೀಡುತ್ತೇವೆ ಅಂತಾ ಠಾಕೂರ್ ಹೇಳಿದರು.