
ಊಟದ ಜೊತೆ ನೆಂಜಿಕೊಳ್ಳಲು ತುಸು ಉಪ್ಪಿನಕಾಯಿ ಇದ್ದರೆ ಸಾಕು, ಎಂಥಾ ರುಚಿ ಎನ್ನುವವರಲ್ಲಿ ನೀವೂ ಒಬ್ಬರೇ. ಹಾಗಿದ್ದರೆ ಇಲ್ಲಿ ಕೇಳಿ.
ಉಪ್ಪಿನಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಎಣ್ಣೆ ಬಳಸಿರುತ್ತಾರೆ. ಇದಕ್ಕೆ ಬಳಸುವ ಮಸಾಲೆಯನ್ನು ಹೆಚ್ಚಾಗಿ ಕುದಿಸುವುದೂ ಇಲ್ಲ. ಹಾಗಾಗಿ ಇದರಿಂದ ಕೊಲೆಸ್ಟ್ರಾಲ್ ಸಮಸ್ಯೆ ಹಾಗೂ ಬಿಪಿ ಹೆಚ್ಚುವ ಸಾಧ್ಯತೆ ಬಹಳ.
ಅಧ್ಯಯನವೊಂದರ ಪ್ರಕಾರ ಉಪ್ಪಿನಕಾಯಿ ಅತಿಯಾಗಿ ಸೇವಿಸುವುದರಿಂದ ಕ್ಯಾನ್ಸರ್ ಹಾಗೂ ಅಸಿಡಿಟಿ ಬರುವ ಸಾಧ್ಯತೆಯೂ ಹೆಚ್ಚು. ಇದರ ವಿಪರೀತ ಸೇವನೆಯಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚುತ್ತದೆ. ಹುಳಿ ತೇಗು, ಗ್ಯಾಸ್ಟಿಕ್, ಹೊಟ್ಟೆನೋವಿನಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಇದರಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಇದ್ದು ಬಿಪಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಉಪ್ಪಿನಕಾಯಿ ತಯಾರಿಕೆ ವೇಳೆ ಬಳಸುವ ವಿನೆಗರ್ ನಿಂದಾಗಿ ಅಲ್ಸರ್ ಸಮಸ್ಯೆಯೂ ಕಾಣಿಸಿಕೊಳ್ಳಬಹುದು. ಉಪ್ಪಿನಕಾಯಿ ಸಂರಕ್ಷಣೆಗೆಂದು ಬಳಸುವ ಪ್ರಿಸರ್ವೇಟಿವ್ ನಿಂದಲೂ ಆರೋಗ್ಯಕ್ಕೆ ಸಮಸ್ಯೆಗಳಿವೆ.