ಪ್ಲಾಸ್ಟಿಕ್ ಉತ್ಪನ್ನಗಳ ದೀರ್ಘಕಾಲದ ಬಳಕೆ ದೇಶಕ್ಕೆ ಶಾಪವಾಗಿ ಪರಿಣಮಿಸಿದೆ. ಇದು ಜೈವಿಕ ವಿಘಟನೀಯವಲ್ಲದ ತ್ಯಾಜ್ಯದ ಪ್ರಮಾಣವನ್ನು ಹೆಚ್ಚಿಸಿದೆ ಮಾತ್ರವಲ್ಲ, ಇದು ಪರಿಸರಕ್ಕೆ ದೊಡ್ಡ ಆರೋಗ್ಯ ಅಪಾಯವಾಗಿದೆ ಎಂದು ಸಾಬೀತಾಗಿದೆ.
ಸಮಸ್ಯೆಯನ್ನು ನಿವಾರಿಸಲು ಹಲವಾರು ಕಂಪೆನಿಗಳು ಪರಿಸರ ಸ್ನೇಹಿ ಪರ್ಯಾಯದೊಂದಿಗೆ ಬಂದಿವೆ. ಉದಾಹರಣೆಗೆ, ಪ್ಲಾಸ್ಟಿಕ್ ಸ್ಟ್ರಾಗಳ ಬದಲು ಕಾಗದ ಸ್ಟ್ರಾ ಬಂದಿದೆ. ಆದರೆ ಅದು ಸರಿಯಾದ ರೀತಿಯಲ್ಲಿ ಜಾರಿಯಾಗಿಲ್ಲ ಎಂಬುದು ಈ ಫೋಟೋ ತೋರಿಸುತ್ತದೆ.
ಪ್ರೇರಣಾ ಚೆಟ್ರಿ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಪೋಸ್ಟ್ ಒಂದು ಕಟುವಾದ ವಾಸ್ತವದ ಚಿತ್ರವನ್ನು ಚಿತ್ರಿಸುತ್ತದೆ. ಇದು ಏಕ-ಬಳಕೆಯ ಪ್ಲಾಸ್ಟಿಕ್‌ಗೆ ಇನ್ನೂ ಹೆಚ್ಚಿನ ಬೇಡಿಕೆಯಿದೆ ಎಂಬುದನ್ನು ತೋರಿಸುತ್ತದೆ.
ಚೆಟ್ರಿಯವರ ಟ್ವೀಟ್‌ನಲ್ಲಿ ಪ್ಲಾಸ್ಟಿಕ್‌ನಲ್ಲಿ ಪ್ಯಾಕ್ ಮಾಡಲಾದ ಕಾಗದದ ಸ್ಟ್ರಾ ನೋಡಬಹುದು. ಸ್ಟ್ರಾ ಅನ್ನು ಕಾಗದದಲ್ಲಿ ಮಾಡಿದ್ದರೂ, ಅದನ್ನು ರಕ್ಷಿಸಲು ಪುನಃ ಪ್ಲಾಸ್ಟಿಕ್ ಮೊರೆ ಹೋಗಿರುವುದು ವಿಪರ್ಯಾಸ!
ಪೋಸ್ಟ್ 803k ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ.