ಬೆಂಗಳೂರಿನ ಬೀದಿಯಲ್ಲಿ ಆಹಾರ ವಿತರಣಾ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡಲು ಕೆಲವರು ಜಾಹೀರಾತು ಫಲಕಗಳನ್ನು ಹೊತ್ತೊಯ್ಯುತ್ತಿರುವ ಫೋಟೋ ಆನ್‌ಲೈನ್‌ನಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ.
ಆಹಾರ ವಿತರಣಾ ಅಪ್ಲಿಕೇಶನ್ ಪ್ರಚಾರ ಮಾಡಲು ಜಾಹೀರಾತು ಫಲಕಗಳನ್ನು ಹೊತ್ತುಕೊಂಡು ಬೆಂಗಳೂರಿನ ರಸ್ತೆಯೊಂದರಲ್ಲಿ ಕೆಲವರು ನಡೆದುಕೊಂಡು ಹೋಗುತ್ತಿರುವ ಫೋಟೋ ಆನ್‌ಲೈನ್‌ನಲ್ಲಿ ವೈರಲ್ ಆಗಿತ್ತು.
ರೋಷನ್ ಎಂಬ ಉದ್ಯಮಿ ಎಕ್ಸ್‌ನಲ್ಲಿ ಹಂಚಿಕೊಂಡ ಫೋಟೋ ಇದುವರೆಗೆ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದ್ದು, ಮಾರ್ಕೆಟಿಂಗ್ ತಂತ್ರದ ಬಗ್ಗೆ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ.
ರೋಶನ್ ತಮ್ಮ ಪೋಸ್ಟ್‌ನಲ್ಲಿ ಕಂಪನಿಯ ಜಾಹೀರಾತು ವಿಧಾನಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ, ವಿವಾದಾತ್ಮಕ ಮಾರ್ಕೆಟಿಂಗ್ ತಂತ್ರಕ್ಕೆ ನೆಟ್ಟಿಗರು ಕೂಡ ಆಕ್ರೋಶ ಹೊರ ಹಾಕಿದ್ದಾರೆ.
![](https://akm-img-a-in.tosshub.com/indiatoday/styles/medium_crop_simple/public/2024-12/r5_0.png?VersionId=zdnyfAIkffl9nNFvjnKHuAN1H0Ka7xMX)
![](https://akm-img-a-in.tosshub.com/indiatoday/styles/medium_crop_simple/public/2024-12/h1.png?VersionId=SysA07xJptx.5fqmIjo2M25V4olS83Ih)
![](https://akm-img-a-in.tosshub.com/indiatoday/styles/medium_crop_simple/public/2024-12/h2.png?VersionId=CixmZJHqidUeUkr7JHnyS.2E68LPQdNn)
![](https://akm-img-a-in.tosshub.com/indiatoday/styles/medium_crop_simple/public/2024-12/h3.png?VersionId=bSQmNBQIMbEd_mRM4w21.TXtJtNWoWxb)