alex Certify ಹೊಸ ರೀತಿಯ ಆಸನ ಆವಿಷ್ಕಾರ; ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಆದ ಆಟೋ ಚಾಲಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ರೀತಿಯ ಆಸನ ಆವಿಷ್ಕಾರ; ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಆದ ಆಟೋ ಚಾಲಕ…!

ಸೋಶಿಯಲ್​ ಮೀಡಿಯಾದಲ್ಲಿ ಬೆಂಗಳೂರಿನ ಟ್ರಾಫಿಕ್​ಗಳ ಬಗ್ಗೆ, ಆಟೋ ಚಾಲಕರು ಮೀಟರ್ ಮೇಲೆ ಇನ್ನಷ್ಟು ದುಡ್ಡು ಹೇರುತ್ತಾರೆ ಎಂಬುದರ ಬಗ್ಗೆ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತೆ.

ಆದರೆ ಈ ಬಾರಿ ಬೇರೊಂದು ವಿಚಾರ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಲ್ಲಿದೆ. ಆಟೋ ಚಾಲಕನೊಬ್ಬ ತಾನು ಕುಳಿತುಕೊಳ್ಳುವ ಆಸನವನ್ನು ರೂಪಾಂತರಗೊಳಿಸಿದ್ದು ಇದರ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡ್ತಿದೆ.

ಅನುಜ್​ ಬನ್ಸಾಲ್​ ಎಂಬವರು ಎಕ್ಸ್​ನಲ್ಲಿ ಈ ಫೋಟೋವನ್ನ ಶೇರ್​ ಮಾಡಿದ್ದಾರೆ. ಕಚೇರಿಗಳಲ್ಲಿ ಸಿಬ್ಬಂದಿ ಕುಳಿತುಕೊಳ್ಳಲು ಬಳಸುವ ಚೇರ್​ನ ಮೇಲೆ ಕುಳಿತು ಆಟೋ ಚಾಲಕ ಆಟೋ ಓಡಿಸುತ್ತಿದ್ದಾರೆ.

ಆಟೋ ರಿಕ್ಷಾಗಳಲ್ಲಿ ಈ ರೀತಿಯ ಕುರ್ಚಿಗಳು ಇರೋದಿಲ್ಲ. ಹೆಚ್ಚುವರಿ ಸಮಯ ಕುಳಿತುಕೊಳ್ಳಲು ಆಟೋದ ಆಸನಗಳು ಸಾಥ್​ ನೀಡದ ಕಾರಣ ಈ ಆಟೋ ಡ್ರೈವರ್​​​ ಈ ರೀತಿಯ ಆಸನವನ್ನ ರೆಡಿ ಮಾಡ್ಕೊಂಡಿದ್ದಾರೆ.

ಈಗಾಗಲೇ ಈ ಆಟೋಡ್ರೈವರ್​ನ ಹೊಸ ಸೀಟು 2 ಲಕ್ಷಕ್ಕೂ ಅಧಿಕ ವೀವ್ಸ್​ ಹಾಗೂ 2834ಕ್ಕೂ ಅಧಿಕ ಲೈಕ್ಸ್​ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಅನೇಕರು ಆಟೋ ಚಾಲಕನ ಬುದ್ಧಿವಂತಿಕೆಗೆ ಭಲೆ ಎಂದಿದ್ದಾರೆ. ಈ ಫೋಟೋ ವೈರಲ್​ ಆದ ಬಳಿಕ ಅನೇಕ ಆಟೋ ಚಾಲಕರು ಇದೇ ಮಾರ್ಗವನ್ನ ಅನುಸರಿಸಿದ್ರೂ ಆಶ್ಚರ್ಯವಿಲ್ಲ.

— Anuj Bansal (@anuj63) September 22, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...