ಕೆಲವೊಂದು ಸಮಸ್ಯೆಗಳಿಂದಾಗಿ ಹುಟ್ಟುತ್ತಲೋ ಅಥವಾ ಬೆಳೆಯುತ್ತಲೋ ಕೆಲವೊಂದು ಅಂಗಾಂಗಗಳು ಊನವಾಗುವುದನ್ನು ಕಾಣಬಹುದು. ಅದರಲ್ಲಿ ಒಂದು ಅನೋನಿಚಿಯಾ. ಈ ಸಮಸ್ಯೆಗೆ ಒಳಗಾದರೆ ಇದು ಕೈ ಉಗುರುಗಳು ಮತ್ತು ಕಾಲ್ಬೆರಳ ಉಗುರುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇಂಥದ್ದೊಂದು ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು, ಈ ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತಿದೆ.
ಅನೋನಿಚಿಯಾ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯ ಕೈಯನ್ನು ತೋರಿಸುವ ಫೋಟೋ ಇದಾಗಿದೆ. ಈ ಫೋಟೋದಲ್ಲಿ ವ್ಯಕ್ತಿಗೆ ಉಗುರುಗಳಿಲ್ಲದ್ದನ್ನು ಗಮನಿಸಬಹುದಾಗಿದೆ.
ಈ ಸಮಸ್ಯೆ ಹುಟ್ಟುತ್ತಲೇ ಬರುತ್ತದೆ. ಕೈ ಅಥವಾ ಕಾಲ್ಬೆರಳು ಇಲ್ಲವೇ ಇವೆರಡಕ್ಕೂ ಸಮಸ್ಯೆಯನ್ನು ತಂದೊಡ್ಡಬಲ್ಲುದು ಈ ರೋಗ. ಚಿತ್ರವನ್ನು ನೋಡಿದರೆ ಆತಂಕ ಮೂಡಿಸುವಂತಿದೆ. ಅನೋನಿಚಿಯಾ ಸಮಸ್ಯೆಯನ್ನು ಹೊಂದಿರುವ ವ್ಯಕ್ತಿ ದೈನಂದಿನ ಜೀವನದಲ್ಲಿ ಏನು ಮಾಡುವುದು ಕಷ್ಟ ಎಂದು ಕೆಲವರು ಊಹಿಸಿದ್ದಾರೆ.