ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಇದೀಗ ಅವರು ತಮ್ಮ ಪತಿಯೊಂದಿಗೆ ಅರಬ್ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ. ಪತಿ ಜೇನ್ ಗುಡ್ನಫ್ ಅವರೊಂದಿಗಿನ ನೈಟ್ ಔಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದಾರೆ.
ಇನ್ನು ಪ್ರೀತಿ ಜಿಂಟಾ ರಾತ್ರಿ ವಿಹಾರದ ಸಮಯದಲ್ಲಿ ನಟಿ ಇಶಾ ಕೊಪ್ಪಿಕರ್ ಅವರನ್ನು ಭೇಟಿಯಾಗಿದ್ದಾರೆ. ಇಶಾ ಕೊಪ್ಪಿಕರ್ ಅವರು ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಯುಗಗಳ ನಂತರ ಭೇಟಿಯಾಗಿದ್ದೇವೆ ಎಂದು ಬರೆದಿದ್ದಾರೆ.
ಹಬ್ಬದ ಹೊತ್ತಲ್ಲಿ ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್
ಈ ವಾರದ ಆರಂಭದಲ್ಲಿ, ಅಂದರೆ ಅಕ್ಟೋಬರ್ 24 ರಂದು, ಪ್ರೀತಿ ಜಿಂಟಾ ಮತ್ತು ಪತಿ ಜೇನ್ ಗುಡ್ನಫ್ ಟಿ-20 ವಿಶ್ವಕಪ್ 2021ರ ಭಾರತ ಮತ್ತು ಪಾಕಿಸ್ತಾನದ ಪಂದ್ಯ ವೀಕ್ಷಿಸಿದ್ದರು. ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಇವರಿಬ್ಬರ ಫೋಟೋವನ್ನು ಕೂಡ ಪ್ರೀತಿ ಜಿಂಟಾ ಪೋಸ್ಟ್ ಮಾಡಿದ್ದಾರೆ. ಪತಿ-ಪತ್ನಿ ಇಬ್ಬರೂ ಟೀಂ ಇಂಡಿಯಾಗೆ ಚಿಯರ್ ಅಪ್ ಮಾಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಪ್ರೀತಿ ಜಿಂಟಾ 2016 ರಲ್ಲಿ ಜೇನ್ ಗುಡೆನಾಫ್ ಅವರನ್ನು ವಿವಾಹವಾಗಿದ್ದಾರೆ. ಮದುವೆ ಬಳಿಕ ಅವರು ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ನೆಲೆಸಿದ್ದಾರೆ. ಆದಾಗ್ಯೂ, ಪ್ರೀತಿ ಜಿಂಟಾ ಆಗಾಗ್ಗೆ ಭಾರತಕ್ಕೆ ಪ್ರಯಾಣಿಸುತ್ತಲೇ ಇರುತ್ತಾರೆ. ಆಕೆ ಕೊನೆಯದಾಗಿ ಭಯಾಜಿ ಸೂಪರ್ಹಿಟ್ ಚಿತ್ರದಲ್ಲಿ ಅಭಿನಯಿಸಿದ್ದರು.