
ವಿಚ್ಛೇದನದ ಬಳಿಕ ಮಾಧ್ಯಮಗಳಿಗೆ ಸುದ್ದಿ ಮಾಡಲು ಸದಾ ಬೇಕಾಗಿಬಿಟ್ಟಿರುವಂತೆ ಕಾಣುವ ಸಮಂತಾ ರುತ್ ಪ್ರಭು ಆಂಧ್ರ ಪ್ರದೇಶದ ಕಡಪಾಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಅಮೀಣ್ ಪೀರ್ ದರ್ಗಾಗೆ ತೆರಳಿದ್ದಾರೆ.
ದರ್ಗಾದ ಒಳಗೆ ಚಾದರವೊಂದನ್ನು ತೆಗೆದುಕೊಂಡು ಬಂದ ಸಮಂತಾರ ಚಿತ್ರಗಳು ವೈರಲ್ ಆಗಿವೆ.
ಹೆಲಿಕಾಪ್ಟರ್ ದುರಂತದ ಅಂತಿಮ ಕ್ಷಣಗಳ ಸೆರೆಹಿಡಿದ ಮೊಬೈಲ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ
ಮಾಜಿ ಪತಿ ನಾಗ ಚೈತನ್ಯರಿಂದ ಬೇರ್ಪಟ್ಟ ಬಳಿಕ ಬೇಡವಾದ ಕಾರಣಕ್ಕೆ ಸುದ್ದಿಯಾಗುತ್ತಿರುವ ಸಮಂತಾ ಸದ್ಯಕ್ಕೆ ಭಾರೀ ಬೇಡಿಕೆಯಲ್ಲಿರುವ ನಟಿಯಾಗಿದ್ದಾರೆ. ಅಮೇಜ಼ಾನ್ ವೆಬ್ ಸೀರೀಸ್ ’ದಿ ಫ್ಯಾಮಿಲಿ ಮ್ಯಾನ್ 2’ನಲ್ಲಿನ ಪಾತ್ರದಿಂದ ಫುಲ್ ಡಿಮ್ಯಾಂಡ್ನಲ್ಲಿದ್ದಾರೆ.
ಅಕ್ಟೋಬರ್ ತಿಂಗಳಿನಲ್ಲಿ ಸಮಂತಾ ತಮ್ಮ ಮಾಜಿ ಪತಿ ನಾಗ ಚೈತನ್ಯರಿಂದ ಬೇರ್ಪಟ್ಟ ವಿಚಾರವನ್ನು ಖುದ್ದು ಬಹಿರಂಗಪಡಿಸಿದ್ದರು.