
ಇಂಡೋನೇಷ್ಯಾದ ವ್ಯಕ್ತಿಯೊಬ್ಬ ತನ್ನ ಪ್ರೀತಿಯ ರೈಸ್ ಕುಕ್ಕರ್ ಅನ್ನು ಮದುವೆಯಾಗುವ ಫೋಟೋಗಳು ಟ್ವಿಟ್ಟರ್‌ನಲ್ಲಿ ವೈರಲ್ ಆಗಿವೆ. ಕಹಿರೋಲ್ ಅನಮ್ ಎಂಬ ವರ ಬಿಳಿ ಉಡುಪು ಧರಿಸಿದ್ದರೆ, ವಧು (ರೈಸ್ ಕುಕ್ಕರ್) ಕೇವಲ ಮದುವೆಯ ಮುಸುಕನ್ನು ಧರಿಸಿದ್ದಾಳೆ. ಆದರೆ ಮದುವೆಯಾಗಿ ನಾಲ್ಕೇ ದಿನದಲ್ಲಿ ಡೈವೋರ್ಸ್ ನೀಡಿದ್ದಾನಂತೆ.
ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ವಧು ಮತ್ತು ವರ ಒಟ್ಟಿಗೆ ಪೋಸ್ ನೀಡುವುದನ್ನು ತೋರಿಸುತ್ತದೆ. ಒಂದು ಚಿತ್ರದಲ್ಲಿ, ವಿವಾಹವನ್ನು ಕಾನೂನುಬದ್ಧವಾಗಿಸಲು ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಕಹಿರೋಲ್ ಅನಮ್ ವಿವಾಹ ಪತ್ರಗಳಿಗೆ ಸಹಿ ಹಾಕುತ್ತಿರುವುದು ಕಂಡುಬರುತ್ತದೆ. ಇನ್ನೊಂದು ಚಿತ್ರದಲ್ಲಿ, ಅವನು ವಧುವನ್ನು ಚುಂಬಿಸುತ್ತಿರುವುದನ್ನು ನೋಡಬಹುದು.
BREAKING: ರಾಜ್ಯದಲ್ಲಿಂದು 539 ಜನರಿಗೆ ಕೊರೋನಾ ಸೋಂಕು
ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋಗಳನ್ನು ಕಹಿರೋಲ್ ಅನಮ್ ಹಂಚಿಕೊಂಡಿದ್ದಾನೆ. “ಬಿಳಿ, ಸ್ತಬ್ಧ, ಪರಿಪೂರ್ಣ. ಹೆಚ್ಚು ಮಾತನಾಡುವುದಿಲ್ಲ, ಅಡುಗೆ ಚೆನ್ನಾಗಿ ಮಾಡುತ್ತದೆ, ಕನಸು ನನಸಾಗುತ್ತದೆ. ನೀನಿಲ್ಲದೆ ನನ್ನ ಅನ್ನ ಬೇಯಲ್ಲ” ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾನೆ.
ಆದರೆ, ಮದುವೆಯಾಗಿ ನಾಲ್ಕು ದಿನಗಳ ಬಳಿಕ ಕುಕ್ಕರ್ ಗೆ ಡಿವೋರ್ಸ್ ನೀಡಿರುವುದಾಗಿ ಹೇಳಿಕೊಂಡಿದ್ದಾನೆ. ಯಾಕೆಂದರೆ “ಅವಳು ಅಕ್ಕಿ ಬೇಯಿಸುವುದರಲ್ಲಿ ಉತ್ತಮವಾಗಿದ್ದಾಳೆ. ಆದರೆ ಬೇರೆ ಯಾವುದೇ ಖಾದ್ಯಗಳನ್ನು ಚೆನ್ನಾಗಿ ಮಾಡುವುದಿಲ್ಲ” ಎಂದಿದ್ದಾನೆ. ಸದ್ಯ, ನೆಟ್ಟಿಗರು ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.