ವೇಲ್ಸ್: ತಮ್ಮ ಒಪ್ಪಿಗೆಯಿಲ್ಲದೆ ಸಾರ್ವಜನಿಕವಾಗಿ ಹಾಲುಣಿಸುತ್ತಿರುವ ಮಹಿಳೆಯರ ಫೋಟೋ ತೆಗೆಯುವುದನ್ನು ಬ್ರಿಟಿಷ್ ಸಂಸತ್ತು ಮಂಗಳವಾರ ಕಾನೂನುಬಾಹಿರಗೊಳಿಸಿದೆ.
ಬ್ರಿಟನ್ ಸಂಸತ್ತಿನಲ್ಲಿ ಮಂಡಿಸಲಾದ ನಿರ್ಣಯದ ಪ್ರಕಾರ, ಈ ನಿಯಮ ಉಲ್ಲಂಘಿಸುವವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಅಪರಾಧ, ಶಿಕ್ಷೆ ಮತ್ತು ನ್ಯಾಯಾಲಯಗಳ ಮಸೂದೆಯ ತಿದ್ದುಪಡಿಯಲ್ಲಿ ಈ ಪ್ರಸ್ತಾಪವನ್ನು ಸೇರಿಸಲಾಗಿದೆ.
ಈ ತಿದ್ದುಪಡಿಯ ಮೂಲ ಕಾರಣವೇನೆಂದರೆ ಉತ್ತರ ಲಂಡನ್‌ನ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು, ತನ್ನ ನಾಲ್ಕು ತಿಂಗಳ ಹೆಣ್ಣು ಮಗುವಿಗೆ ಹಾಲುಣಿಸುತ್ತಿದ್ದರು. ಇದರ ಫೋಟೋ ತೆಗೆದ ವಾಲ್‌ಥಾಮ್‌ಸ್ಟೋವ್ ಹಾಗೂ ಲೇಬರ್ ಎಂಪಿ ಸ್ಟೆಲ್ಲಾ ಕ್ರೆಸ್ಸೆ ನಡುವಿನ ಸುದೀರ್ಘ ಹೋರಾಟದ ಫಲಿತಾಂಶವಾಗಿದೆ. ಈ ಸುದ್ದಿಯನ್ನು ಸ್ಟೆಲ್ಲಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಯಾನಕ್ಕೆ ತಮಗೆ ಬೆಂಬಲವನ್ನು ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ, ಮ್ಯಾಂಚೆಸ್ಟರ್ ಮೂಲದ ಡಿಸೈನರ್ ಜೂಲಿಯಾ ಕೂಪರ್ ಸಾರ್ವಜನಿಕ ಉದ್ಯಾನವನದಲ್ಲಿ ತನಗಾದ ಭಯಾನಕ ಅನುಭವದ ನಂತರ ಹಾಲುಣಿಸುವ ತಾಯಂದಿರ ಫೋಟೋಗಳನ್ನು ತೆಗೆಯುವುದರ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದ್ದರು. ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದರಾದ ಜೆಫ್ ಸ್ಮಿತ್ ಮತ್ತು ಸ್ಟೆಲ್ಲಾ ಕ್ರೆಸ್ಸೆ ಅವರನ್ನು ಸಂಪರ್ಕಿಸಿದ್ದರು.