ಯಾರಾದರೂ ನೋವಲ್ಲಿ ಇದ್ದರೆ, ಕಷ್ಟದಲ್ಲಿ ಇದ್ದರೆ ಒಮ್ಮೆ ಅವರ ಕೈ ಹಿಡಿದು ಸಮಾಧಾನ ಮಾಡಿ, ಇಲ್ಲಾ ಧೈರ್ಯ ಹೇಳಿದ್ರೆ ಅವರು ಎಷ್ಟೋ ನಿರಾಳರಾಗಿ ಬಿಡ್ತಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲೂ ಇಂತಹದ್ದೇ ಫೋಟೋ ಒಂದು ವೈರಲ್ ಆಗಿದೆ..
ನೋಡಿದ್ರಾ, ಈ ಚಿತ್ರವನ್ನ ಇಲ್ಲಿ ಫೈಟ್ ಅಟೆಂಡೆಂಟ್ ಕೆಳಗೆ ಕುಳಿತು ಪ್ರಯಾಣಿಕರೊಬ್ಬರ ಕೈ ಹಿಡಿದು ಸಂತೈಸುತ್ತಿದ್ದಾರೆ. ಇಲ್ಲಿ ಸೀಟ್ ಮೇಲೆ ಕುಳಿತಾಕೆಗೆ ವಿಮಾನ ಪ್ರಯಾಣವೆಂದರೆ ಭಯ. ವಿಮಾನ ಟೇಕಾಫ್ ಆಗ್ತಿದ್ದ ಹಾಗೆಯೇ ಆಕೆಗೆ ಭಯ ಶುರುವಾಗಿರುತ್ತೆ. ಅಷ್ಟೆ ಅಲ್ಲ ಆಕೆಗೆ ಜೀವವೇ ಬಾಯಿಗೆ ಬಂದ ಹಾಗಿರುತ್ತೆ. ಆ ಭಯ ಆಕೆಯ ಮುಖದಲ್ಲಿ ಎದ್ದು ಕಾಣಿರುತ್ತೆ. ಅದಕ್ಕೆ ಅಲ್ಲೇ ಇದ್ದ ಅಟೆಂಡೆಂಟ್, ಸೀಟ್ ಬಳಿ ಹೋಗಿ ಕೂತು, ಆಕೆಯ ಕೈ ಹಿಡಿದು ಧೈರ್ಯ ಹೇಳುತ್ತಾರೆ. ಇದರಿಂದ ಆಕೆಯ ಒತ್ತಡ ಎಷ್ಟೋ ಕಡಿಮೆಯಾಗುತ್ತೆ.
ಡೆಲ್ಟಾ ಏರ್‌ಲೈನ್‌ನಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. ಫೈಟ್ ಅಟೆಂಡೆಂಟ್ ಡೀನ್ ಶಾನನ್ ಮಹಿಳಾ ಪ್ರಯಾಣಿಕರನ್ನು ಸಂತೈಸುತ್ತಿರುವ ಈ ಫೋಟೋ ಅನ್ನು ಜನವರಿ 14ರಂದು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನ್ನ ಸುಮಾರು 12,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇನ್ನೂ 1,200 ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ.
ಈ ಪೋಸ್ಟ್‌ನ್ನ ನೋಡಿ ಅನೇಕರು ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಒಬ್ಬರು ‘ಕರುಣೆಯುಳ್ಳ ಇಂಥ ವಿಮಾನ ಸಿಬ್ಬಂದಿಯ ಅವಶ್ಯಕತೆ ಈ ಜಗತ್ತಿಗೆ ಬಹಳ ಇದೆ’ ಎಂದು ಹೇಳಿದ್ದಾರೆ. ಇನ್ನೊಬ್ಬರು ‘ಇಡೀ ಪ್ರಯಾಣದುದ್ದಕ್ಕೂ ಆಕೆಯಲ್ಲಿ ಆತ್ಮವಿಶ್ವಾಸ ತುಂಬಿದ ನಿಮ್ಮ ಮಾನವೀಯತೆ ಶ್ಲಾಘನೀಯ’ ಎಂದಿದ್ದಾರೆ. ಮಗದೊಬ್ಬರು ‘ಈ ಜಗತ್ತಿಗೆ ಇಂಥ ಸಹಾನುಭೂತಿಯನ್ನು ವ್ಯಕ್ತಪಡಿಸುವ ಜೀವಗಳ ಅಗತ್ಯವಿದೆ. ನಿಮ್ಮಂಥವರ ಸಂತತಿ ಹೆಚ್ಚಲಿ ಎಂದು ಹೇಳಿದ್ದಾರೆ.